ADVERTISEMENT

ವಿದ್ಯಾರ್ಥಿಗಳ ಮಧ್ಯೆ ಧರ್ಮದ ವಿಷ ಗೋಡೆ ನಿರ್ಮಾಣ: ರಮ್ಯಾ, ಕಮಲ್‌ ಹಾಸನ್‌ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 8:23 IST
Last Updated 9 ಫೆಬ್ರುವರಿ 2022, 8:23 IST
ಕಮಲ್‌, ರಮ್ಯಾ
ಕಮಲ್‌, ರಮ್ಯಾ   

ರಾಜ್ಯದಲ್ಲಿ ಹಿಜಾಬ್‌–ಕೇಸರಿ ಶಾಲು ವಿವಾದ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರ ಬಗ್ಗೆ ಚಂದನವನದ ನಟಿ ರಮ್ಯಾ ಹಾಗೂ ತಮಿಳು ನಟ ಕಮಲ್‌ ಹಾಸನ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್‌ ಮೂಲಕ ರಮ್ಯಾ ಹಾಗೂ ಕಮಲ್‌ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ.

’ಪಕ್ಕದ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ಶಾಂತಿ ಕಡದಲು ಪ್ರಚೋದಿಸುತ್ತಿವೆ. ವಿದ್ಯಾರ್ಥಿಗಳ ಮಧ್ಯೆ ಧರ್ಮದ ವಿಷದ ಗೋಡೆ ನಿರ್ಮಾಣವಾಗುತ್ತಿದೆ. ಅಲ್ಲಿನ ಘಟನೆಗಳು ತಮಿಳುನಾಡಿಗೆ ಬರಬಾರದು. ಈ ಬಗ್ಗೆ ಪ್ರಗತಿಪರ ಶಕ್ತಿಗಳು ಹೆಚ್ಚು ಜಾಗೃತಿವಹಿಸಬೇಕು’ ಎಂದು ಕಮಲ್​ ಹಾಸನ್​ ಟ್ವೀಟ್​ ಮಾಡಿದ್ದಾರೆ.

ADVERTISEMENT

ಚಂದನವನದ ನಟಿ ರಮ್ಯಾ ಟ್ವೀಟ್‌ ಮಾಡಿ, ‘ಭಾರತದ ಯುವಜನರು ಈ ರೀತಿ ಎರಡು ಭಾಗ ಆಗಿರುವುದನ್ನು ನೋಡಲು ದುಃಖವಾಗುತ್ತದೆ’ ಎಂದು ರಮ್ಯಾ ವಿಡಿಯೊವನ್ನು ಹಂಚಿಕೊಂಡು ಟ್ವೀಟ್‌ ಮಾಡಿದ್ದಾರೆ.

ರಾಜ್ಯದಲ್ಲಿ ಹಿಜಾಬ್‌–ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ಶಾಲಾ– ಕಾಲೇಜುಗಳಿಗೆ 3 ದಿನ ರಜೆ ಘೋಷಣೆ ಮಾಡಲಾಗಿದೆ. ಹಿಜಾಬ್‌ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ಹೈಕೋರ್ಟ್‌ ಅಂಗಳದಲ್ಲಿದೆ. ಇದರ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.