ADVERTISEMENT

ಲಾಭಕ್ಕಾಗಿ ಫೇಸ್‌ಬುಕ್ ಸುರಕ್ಷತೆಯನ್ನು ಬದಿಗೊತ್ತಿಲ್ಲ: ಮಾರ್ಕ್ ಜುಕರ್‌ಬರ್ಗ್

ಏಜೆನ್ಸೀಸ್
Published 6 ಅಕ್ಟೋಬರ್ 2021, 4:35 IST
Last Updated 6 ಅಕ್ಟೋಬರ್ 2021, 4:35 IST
ಜುಕರ್‌ಬರ್ಗ್: ಎಎಫ್‌ಪಿ ಚಿತ್ರ
ಜುಕರ್‌ಬರ್ಗ್: ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ಫೇಸ್‌ಬುಕ್‌ ಒಡೆತನದ ಆ್ಯಪ್‌ಗಳ ಸೇವೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ಜಗತ್ತಿನಾದ್ಯಂತ ಬಳಕೆದಾರರು ತೊಂದರೆ ಅನುಭವಿಸಿದ್ದು, ಫೇಸ್‌ಬುಕ್ ಜನರ ರಕ್ಷಣೆ, ಸೇವೆಗಿಂತ ಲಾಭ ಮಾಡುವುದರಲ್ಲೇ ಆಸಕ್ತಿ ಹೊಂದಿದೆ ಎಂಬ ಸಾಮಾಜಿಕ ಜಾಲತಾಣದ ಟೀಕೆಗಳಿಗೆ ಸಿಇಒ ಮಾರ್ಕ್ಜುಕರ್‌ಬರ್ಗ್ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಮಕ್ಕಳಿಗೆ ಹಾನಿಯನ್ನುಂಟುಮಾಡುವ ಕಂಟೆಂಟ್‌ಗಳಿಗೆ ಉತ್ತೇಜನ ನೀಡುತ್ತಿದೆ ಮತ್ತು ಅದಕ್ಕೆ ನಿಯಂತ್ರಣದ ಅಗತ್ಯವಿದೆ. ಸುರಕ್ಷತೆಯನ್ನು ಬದಿಗೊತ್ತಿ ಕಂಪನಿಯು ಲಾಭವನ್ನು ನೋಡುತ್ತಿದೆ ಎಂಬ ಸಾಮಾಜಿಕ ಜಾಲತಾಣದ ಟೀಕೆಗಳು ‘ನಿಜವಲ್ಲ’ಎಂದು ಅವರು ಹೇಳಿದ್ದಾರೆ.

‘ನಾವು ಉದ್ದೇಶಪೂರ್ವಕವಾಗಿಯೇ ಲಾಭಕ್ಕಾಗಿ ಜನರಿಗೆ ಕೋಪ ಬರಿಸುವಂತಹ ಕಂಟೆಂಟ್‌ಗಳನ್ನು ನೀಡುತ್ತಿದ್ದೇವೆ ಎಂಬ ವಾದವು ತರ್ಕಬದ್ಧವಲ್ಲ’ಎಂದು ಜುಕರ್‌ಬರ್ಗ್ ಫೇಸ್‌ಬುಕ್ ಉದ್ಯೋಗಿಗಳಿಗೆ ಬರೆದ ಟಿಪ್ಪಣಿಯನ್ನು ಅಮೆರಿಕದ ಸಂಸದರ ಸಮಿತಿಗೆ ವಿವರಣೆ ನೀಡಿದ ಬಳಿಕ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

‘ಜನರು ಕೋಪಗೊಳ್ಳುವ ಅಥವಾ ಖಿನ್ನತೆಗೆ ಒಳಗಾಗುವ ಉತ್ಪನ್ನಗಳನ್ನು ನಿರ್ಮಿಸಲು ಹೊರಟಿರುವ ಯಾವುದೇ ಟೆಕ್ ಕಂಪನಿ ನನಗೆ ಗೊತ್ತಿಲ್ಲ. ನೈತಿಕತೆ, ವ್ಯಾಪಾರ ಮತ್ತು ಉತ್ಪನ್ನ ಪ್ರೋತ್ಸಾಹ ಎಲ್ಲವೂ ವಿರುದ್ಧ ದಿಕ್ಕಿನಲ್ಲಿವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.