ADVERTISEMENT

ಫೇಸ್‌ಬುಕ್ ಇಂಡಿಯಾ ಮುಖ್ಯಸ್ಥ ಸ್ಥಾನ ತೊರೆದ ಅಜಿತ ಮೋಹನ್: ಸ್ನ್ಯಾಪ್‌ನತ್ತ ಪಯಣ?

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 15:55 IST
Last Updated 3 ನವೆಂಬರ್ 2022, 15:55 IST
ಅಜಿತ್‌ ಮೋಹನ್‌
ಅಜಿತ್‌ ಮೋಹನ್‌    

ನವದೆಹಲಿ: ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನ ಮಾಲೀಕ ಸಂಸ್ಥೆ 'ಮೆಟಾ ಇಂಡಿಯಾ'ದ ಮುಖ್ಯಸ್ಥ ಅಜಿತ್ ಮೋಹನ್ ಅವರು ಕಂಪನಿ ತೊರೆದಿರುವುದಾಗಿ ಮೆಟಾ ಗ್ಲೋಬಲ್ ಬ್ಯುಸಿನೆಸ್ ಗ್ರೂಪ್‌ನ ಉಪಾಧ್ಯಕ್ಷ ನಿಕೋಲಾ ಮೆಂಡೆಲ್‌ಸೋನ್ ತಿಳಿಸಿದ್ದಾರೆ.

ಅಜಿತ್ ಮೋಹನ್ ಅವರು 2019 ಜನವರಿಯಲ್ಲಿ ಭಾರತೀಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿ ಮೆಟಾ ಸೇರಿದ್ದರು. ಅದಕ್ಕೂ ಹಿಂದೆ ಉಮಂಗ್‌ ಬೇಡಿ ಅವರು, ಈ ಸ್ಥಾನ ನಿಭಾಯಿಸಿದ್ದರು.

ಬಲ್ಲ ಮೂಲಗಳ ಮಾಹಿತಿ ಪ್ರಕಾರ ಅಜಿತ್ ಅವರು ಸಾಮಾಜಿಕ ಮಾಧ್ಯಮ ‘ಸ್ನ್ಯಾಪ್‌’ಗೆ ಸೇರಲಿದ್ದಾರೆ ಎನ್ನಲಾಗಿದೆ. ಅಲ್ಲಿ ಅವರು ಏಷ್ಯಾ–ಪೆಸಿಫಿಕ್‌ ವಿಭಾಗದ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.