ADVERTISEMENT

ಫೇಸ್‌ಬುಕ್‌ನಿಂದ ಗೂಗಲ್ ಫೋಟೊಸ್‌ಗೆ ವರ್ಗಾಯಿಸಿಕೊಳ್ಳಿ ಫೋಟೊ, ವಿಡಿಯೊ; ಹೊಸ ಆಯ್ಕೆ

ಏಜೆನ್ಸೀಸ್
Published 3 ಡಿಸೆಂಬರ್ 2019, 6:31 IST
Last Updated 3 ಡಿಸೆಂಬರ್ 2019, 6:31 IST
ಫೇಸ್‌ಬುಕ್‌
ಫೇಸ್‌ಬುಕ್‌    

ಸಾಮಾಜಿಕ ಸಂಪರ್ಕ ಮಾಧ್ಯಮ ಫೇಸ್‌ಬುಕ್‌ನಿಂದ ಫೋಟೊ ಮತ್ತು ವಿಡಿಯೊಗಳನ್ನು ಗೂಗಲ್‌ ಫೋಟೊಸ್‌ಗೆ ನೇರವಾಗಿ ವರ್ಗಾಯಿಸುವ ಆಯ್ಕೆಯನ್ನು ಪರಿಚಯಿಸಿರುವುದಾಗಿ ಫೇಸ್‌ಬುಕ್‌ ಇಂಕ್‌ ಸೋಮವಾರ ಹೇಳಿಕೊಂಡಿದೆ.

ಗೂಗಲ್‌ ಫೋಟೊಸ್‌ನಂತಹ ಸಂಗ್ರಹ ಸೇವೆಗಳಿಗೆ ನೇರವಾಗಿ ವಿಡಿಯೊ, ಫೋಟೊ ವರ್ಗಾಯಿಸಿಕೊಳ್ಳುವ ಆಯ್ಕೆ ಮೊದಲಿಗೆ ಐರ್ಲೆಂಡ್‌ನ ಫೇಸ್‌ಬುಕ್‌ ಬಳಕೆದಾರರಿಗೆ ಸಿಗಲಿದೆ. 2020ರ ಮೊದಲಾರ್ಧದಲ್ಲಿ ಜಗತ್ತಿನ ಎಲ್ಲ ಬಳಕೆದಾರರಿಗೆ ಈ ಆಯ್ಕೆ ತೆರೆದುಕೊಳ್ಳಲಿದೆ.

ದತ್ತಾಂಶ ವರ್ಗಾವಣೆಯು ಗೂಢ ಲಿಪಿಕರಣಗೊಳ್ಳಲಿದೆ(ಎನ್‌ಕ್ರಿಪ್ಟ್‌) ಹಾಗೂ ವರ್ಗಾವಣೆಗೂ ಮುನ್ನ ಬಳಕೆದಾರರು ಪಾಸ್‌ವರ್ಡ್‌ ನಮೂದಿಸಲು ಕೇಳುತ್ತದೆ ಎಂದು ಫೇಸ್‌ಬುಕ್‌ ಬ್ಲಾಗ್‌ನಲ್ಲಿ ಪ್ರಕಟಿಸಿಕೊಂಡಿದೆ.

ದತ್ತಾಂಶ ವರ್ಗಾವಣೆಗೆ ಸಹಕಾರಿಯಾಗುವ ವ್ಯವಸ್ಥೆಯನ್ನು ರೂಪಿಸುತ್ತಿದ್ದು, ಹೊಸ ಟೂಲ್‌ಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಇರುವುದಾಗಿ ಫೇಸ್‌ಬುಕ್‌ ಸೆಪ್ಟೆಂಬರ್‌ನಲ್ಲಿ ಹೇಳಿತ್ತು. ಮಾಸಿಕ 10 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಸಾರ್ವಜನಿಕ ಸಂಪರ್ಕ ಮಾಧ್ಯಮದಲ್ಲಿ ಬಳಕೆದಾರರು ದತ್ತಾಂಶವನ್ನು ಸುಲಭವಾಗಿ ಇತರೆ ಸೇವೆಗಳಿಗೆ ವರ್ಗಾಯಿಸುವ ಆಯ್ಕೆ ಒದಗಿಸುವ ಕುರಿತು ಅಮೆರಿಕ ಸಂಸತ್ತಿನಲ್ಲಿ ಅಕ್ಟೋಬರ್‌ನಲ್ಲಿ ಮಸೂದೆ ಪ್ರಸ್ತಾಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.