ADVERTISEMENT

Instagram ಕಂಟೆಂಟ್ ಸ್ಥಿತಿ ಬಗ್ಗೆ ಕ್ರಿಯೇಟರ್‌ಗಳಿಗೆ ಮಾಹಿತಿ ನೀಡಲಿದೆ ಕಂಪನಿ

ಇನ್‌ಸ್ಟಾಗ್ರಾಂ ರಚನೆಕಾರರಿಗೆ ಕಂಟೆಂಟ್ ಪೋಸ್ಟ್ ಬಗ್ಗೆ ಮಾಹಿತಿ

ಐಎಎನ್ಎಸ್
Published 8 ಡಿಸೆಂಬರ್ 2022, 10:14 IST
Last Updated 8 ಡಿಸೆಂಬರ್ 2022, 10:14 IST
   

ನವದೆಹಲಿ: ಮೆಟಾ ಒಡೆತನದ ಇನ್‌ಸ್ಟಾಗ್ರಾಂ, ತನ್ನ ವೇದಿಕೆಯಲ್ಲಿ ಕ್ರಿಯೇಟರ್ಸ್ ಪೋಸ್ಟ್ ಮಾಡುವ ಫೋಟೊ ಮತ್ತು ರೀಲ್ಸ್ ವಿಡಿಯೊ ಸ್ಥಿತಿಯ ಬಗ್ಗೆ ರಚನೆಕಾರರಿಗೆ ಮಾಹಿತಿ ನೀಡಲಿದೆ.

ಇನ್‌ಸ್ಟಾ ಕ್ರಿಯೇಟರ್ಸ್ ವಿವಿಧ ಕಂಟೆಂಟ್‌ಗಳನ್ನು ರಚಿಸುತ್ತಾರೆ. ಅವುಗಳು ಅವರ ಫಾಲೋವರ್ಸ್ ಅನ್ನು ಮಾತ್ರ ತಲುಪುವುದೇ ಅಥವಾ ಇತರ ಬಳಕೆದಾರರಿಗೂ ಲಭ್ಯವಾಗಲಿದೆಯೇ ಎನ್ನುವುದನ್ನು ರಚನೆಕಾರರು ತಿಳಿಯಬಹುದು.

ಜತೆಗೆ, ಕಂಟೆಂಟ್ ಕುರಿತಂತೆ ಯಾವುದೇ ಕಾಪಿರೈಟ್, ನಿರ್ಬಂಧ ಇದ್ದರೂ ತಿಳಿಯುವುದರಿಂದ, ಈ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.

ADVERTISEMENT

ಇನ್‌ಸ್ಟಾಗ್ರಾಂ ಈಗಾಗಲೇ ವಿವಿಧ ಇತರ ಆ್ಯಪ್‌ಗಳಿಂದ ಸ್ಪರ್ಧೆ ಎದುರಿಸುತ್ತಿದೆ. ಹೀಗಾಗಿ ಹೆಚ್ಚಿನ ಬಳಕೆದಾರರನ್ನು ಉಳಿಸಿಕೊಳ್ಳುವುದು ಮತ್ತು ಅಧಿಕ ಕಂಟೆಂಟ್ ಒದಗಿಸಲು ಅನುಕೂಲವಾಗುವಂತೆ ವಿವಿಧ ಕ್ರಮ ಕೈಗೊಂಡಿದೆ. ಕಂಟೆಂಟ್ ರಚನೆಕಾರರಿಗೆ ತರಬೇತಿ ಕಾರ್ಯಕ್ರಮವನ್ನು ಕೂಡ ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.