ADVERTISEMENT

ನಕಲಿ ಖಾತೆಗಳಿಂದ ಅನುಯಾಯಿಗಳ ಸಂಖ್ಯೆ ಹೆಚ್ಚಿಸಿಕೊಂಡ ಎಲಾನ್ ಮಸ್ಕ್?

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 13:05 IST
Last Updated 30 ಏಪ್ರಿಲ್ 2022, 13:05 IST
ಎಲಾನ್ ಮಸ್ಕ್ ಟ್ವಿಟರ್ ಖಾತೆಯ ಚಿತ್ರ
ಎಲಾನ್ ಮಸ್ಕ್ ಟ್ವಿಟರ್ ಖಾತೆಯ ಚಿತ್ರ   

ಸ್ಯಾನ್ ಫ್ರಾನ್ಸಿಸ್ಕೊ: 44 ಬಿಲಿಯನ್ ಡಾಲರ್ (ಸುಮಾರು ₹3.36 ಲಕ್ಷ ಕೋಟಿ)ಗೆ ಎಲಾನ್ ಮಸ್ಕ್ ಅವರು ಟ್ವಿಟರ್ ಕಂಪನಿಯನ್ನು ಖರೀದಿಸಿದ ಬಳಿಕ ಅವರ ಟ್ವಿಟರ್ ಖಾತೆಯ ಅನುಯಾಯಿಗಳ ಸಂಖ್ಯೆಯಲ್ಲಿ 60 ಲಕ್ಷ ಏರಿಕೆಯಾಗಿದೆ.

ಟ್ವಿಟರ್ ಒಪ್ಪಂದಕ್ಕೂ ಮೊದಲು ಟೆಸ್ಲಾ ಸಿಇಒ ಸುಮಾರು 83 ಮಿಲಿಯನ್(8.3 ಕೋಟಿ) ಅನುಯಾಯಿಗಳನ್ನು ಹೊಂದಿದ್ದರು. ಸದ್ಯ ಅವರು 89 ಮಿಲಿಯನ್‌(8.9 ಕೋಟಿ)ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಈ ನಡುವೆ, ನಕಲಿ ಖಾತೆಗಳನ್ನು ಬಳಸಿಕೊಂಡು ಮಸ್ಕ್ ಅವರ ಅನುಯಾಯಿಗಳ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ ಎಂದು ಟೈಮ್‌ನ ವರದಿ ಹೇಳಿದೆ.

ADVERTISEMENT

ಸ್ಪ್ಯಾಮ್, ಬಾಟ್‌ ಮತ್ತು ಕಡಿಮೆ ಗುಣಮಟ್ಟದ ಖಾತೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿರುವ 25ಕ್ಕೂ ಹೆಚ್ಚು ಅಂಶಗಳನ್ನು ವಿಶ್ಲೇಷಿಸುವ ಮೂಲಕ ಬಳಕೆದಾರರ ಸಂಶೋಧನಾ ಟೂಲ್ ಸ್ಪಾರ್ಕ್‌ಟೋರೊ ಎಲಾನ್ ಮಸ್ಕ್ ಅನುಯಾಯಿಗಳ ಸಂಖ್ಯೆ ಹೆಚ್ಚಳದ ಬಗ್ಗೆ ಪರಿಶೀಲನೆ ನಡೆಸಿದೆ. ನಕಲಿ ಯುಆರ್‌ಎಲ್ ಹೊಂದಿರುವ ಖಾತೆಗಳನ್ನು ಕಂಡುಹಿಡಿದಿದೆ. ಅನುಮಾನಾಸ್ಪದವಾಗಿ ಕಡಿಮೆ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಮಸ್ಕ್ ಅವರನ್ನು ಅನುಸರಿಸುತ್ತಿರುವ ತೀರಾ ಇತ್ತೀಚಿನ 100,000 ಖಾತೆಗಳ ಪೈಕಿ 2,000 ಖಾತೆಗಳನ್ನು ಸ್ಯಾಂಪಲ್ ಆಗಿ ಪರಿಗಣಿಸಿ ವಿಶ್ಲೇಷಣೆ ಮಾಡಲಾಗಿದೆ.

ಕಂಪನಿ ಖರೀದಿ ಒಪ್ಪಂದ ಪ್ರಕ್ರಿಯೆ ಪೂರ್ಣಗೊಂಡ ನಂತರ, ಟ್ವಿಟರ್ ಖಾಸಗಿ ಕಂಪನಿಯಾಗಿ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.