ADVERTISEMENT

’ಕಚ್ಚಾ ಬಾದಮ್‌’ ಹಾಡಿನ ಕಡಲೆಕಾಯಿ ವ್ಯಾಪಾರಿ ಈಗ 'ಸ್ಟಾರ್‌ ಸೆಲೆಬ್ರಿಟಿ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 10:37 IST
Last Updated 10 ಫೆಬ್ರುವರಿ 2022, 10:37 IST
ಭುಬನ್ ಭಡ್ಯಾಕರ್
ಭುಬನ್ ಭಡ್ಯಾಕರ್   

ಭಾರತ ಹಾಗೂ ವಿದೇಶಗಳಲ್ಲೂ ಟಾಪ್‌ ಟ್ರೆಂಡ್‌ ಆಗಿರುವ ’ಕಚ್ಚಾ ಬಾದಾಮ್‌’ ಹಾಡಿಗೆ ಸೆಲೆಬ್ರಿಟಿಗಳು ಮಾತ್ರವಲ್ಲದೇ ಸಾಮಾನ್ಯ ಜನರು ಹೆಜ್ಜೆ ಹಾಕುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಾರೆ.

ಆಟಗಾರರು, ಸಿನಿಮಾ ತಾರೆಯರು, ರೂಪದರ್ಶಿಯರು ಸೇರಿದಂತೆ ಅನೇಕರು ಈ ಹಾಡಿಗೆ ಡ್ಯಾನ್ಸ್ ಮಾಡಿ ವಿಡಿಯೊ ಅಪ್‌ಲೋಡ್ ಮಾಡುತ್ತಿದ್ದಾರೆ.

ಬೀದಿ ಬದಿಯಲ್ಲಿ ಕಡಲೆಕಾಯಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಪಶ್ಚಿಮ ಬಂಗಾಳದ ಭುಬನ್ ಭಡ್ಯಾಕರ್ ಅವರೇ ’ಕಚ್ಚಾ ಬಾದಮ್‌, ಹಾಡಿನ ರುವಾರಿ. ಕಡಲೇ ಕಾಯಿ ಮಾರಾಟ ಮಾಡುವ ಸಲುವಾಗಿ ಅವರೇ ಈ ಹಾಡು ಬರೆದು ಹಾಡಿದ್ದರು. ಬಂಗಾಳಿಯಲ್ಲಿ ’ಕಚ್ಚಾ ಬಾದಾಮ್‌’ ಎಂದರೆ ಹಸಿ ಕಡಲೆಕಾಯಿ.

ADVERTISEMENT

ಕಡಲೆ ಕಾಯಿ ಮಾರುತ್ತಾ ಹಾಡು ಹೇಳುತ್ತಿದ್ದ ಭುಬನ್ ಭಡ್ಯಾಕರ್ ಅವರ ವಿಡಿಯೊವನ್ನು ಯಾರೋ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದರು. ಕೆಲ ದಿನಗಳಲ್ಲಿ ಅವರ ಹಾಡು ವೈರಲ್‌ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿತ್ತು.

ಪಾಪ್‌ ಹಾಗೂ ರ್ಯಾಪರ್‌ಗಳು ಕೂಡ ಅವರ ಹಾಡಿಗೆ ಸಂಗೀತ ಸಂಯೋಜನೆ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದೀಗ ಬಂಗಾಳದಲ್ಲಿ ಭಡ್ಯಾಕರ್‌ ಅವರು ಸ್ಟಾರ್‌ ಆಗಿದ್ದಾರೆ.

’ಕಚ್ಚಾ ಬಾದಾಮ್‌’ ಹಾಡು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಹಲವು ವೇದಿಕೆಗಳಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.