ADVERTISEMENT

Viral Video| ಪುಟ್ಟ ಬಾಲಕನ ಪೂಜೆ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 7:23 IST
Last Updated 2 ಸೆಪ್ಟೆಂಬರ್ 2022, 7:23 IST
ಬಾಲಕನಿಂದ ಗಣಪತಿಗೆ ಪೂಜೆ
ಬಾಲಕನಿಂದ ಗಣಪತಿಗೆ ಪೂಜೆ    

ಶಿರಸಿ: ಗಣೇಶ ಚತುರ್ಥಿ ವೇಳೆ ಪುಟ್ಟ ಬಾಲಕನೊಬ್ಬ ಗಣೇಶನ ಪೂಜಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಲ್ಲೂಕಿನ ದೇವನಳ್ಳಿಯ ಪ್ರಸಾದ್ ಭಟ್ ಹಾಗೂ ಪ್ರತಿಮಾ ಭಟ್ ದಂಪತಿಯ ಪುತ್ರ, ಎರಡೂವರೆ ವರ್ಷದ ಬಾಲಕ ಧ್ರುವ ಭಟ್ ಪೂಜಿಸುವ ದೃಶ್ಯ ಸಾಕಷ್ಟು ಮೆಚ್ಚುಗೆ ಗಳಿಸಿದೆ.

ವೃತ್ತಿಯಲ್ಲಿ ಪುರೋಹಿತರಾಗಿರುವ ತಂದೆ ನಿತ್ಯ ಪೂಜೆ ಮಾಡುವುದನ್ನು ಗಮನಿಸಿದ್ದ ಮಗು ತಾನೂ ಅವರಂತೆ ಪೂಜೆ ಮಾಡಲು ಪ್ರಯತ್ನಿಸಿದೆ. ಪಾಲಕರು ಈ ವಿಡಿಯೊವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.