ADVERTISEMENT

ಬಾಲಾಕೋಟ್ ದಾಳಿಗೆ ವರ್ಷ: ಸಾಮಾಜಿಕ ಮಾಧ್ಯಮಗಳಲ್ಲಿ ತೊಟ್ಟಿಕ್ಕುತ್ತಿದೆ ವೀರರಸ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2020, 3:20 IST
Last Updated 26 ಫೆಬ್ರುವರಿ 2020, 3:20 IST
ಚಿತ್ರಕೃಪೆ: ಟ್ವಿಟರ್
ಚಿತ್ರಕೃಪೆ: ಟ್ವಿಟರ್   

ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ದಾಳಿ ನಡೆಸಿ ಇಂದಿಗೆ (ಫೆ.26) ಒಂದು ವರ್ಷವಾಯಿತು. ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಬಸ್‌ ಸ್ಫೋಟಿಸಿ 40 ಯೋಧರ ಸಾವಿಗೆ ಕಾರಣವಾಗಿದ್ದ ಪಾಕ್‌ ಉಗ್ರರ ದುಷ್ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನಡೆದ ಈ ದಾಳಿಯನ್ನು ದೇಶದ ಜನರು ಸ್ವಾಗತಿಸಿದ್ದರು.

ಅಂದಿನ ಈ ದಿನವನ್ನು ಟ್ವಿಟರ್‌ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಜನರು#balakotairstrike ಹ್ಯಾಷ್‌ಟ್ಯಾಗ್ ಬಳಸಿ ನೆನಪಿಸಿಕೊಳ್ಳುತ್ತಿದ್ದಾರೆ.

ಪಾಕ್ ರಕ್ಷಣಾ ಇಲಾಖೆಯು ಬಾಲಾಕೋಟ್ ದಾಳಿ ನಡೆಯುವ ಕೆಲವೇ ಗಂಟೆಗಳ ಮೊದಲು ಟ್ವೀಟ್ ಮಾಡಿದ್ದ ಪಾಕ್ ವಾಯುಪಡೆಯವಿಮಾನ ಮತ್ತು "Sleep tight because PAF is awake." ಎಂಬ ಒಕ್ಕಣೆ ಸಹ ಟ್ರೋಲಿಗರ ವ್ಯಂಗ್ಯಕ್ಕೆ ಗುರಿಯಾಗಿದೆ.

ADVERTISEMENT

‘ಸರಿಯಾಗಿ ಒಂದು ವರ್ಷದ ಹಿಂದೆ ಪಾಕಿಸ್ತಾನ ಚೆನ್ನಾಗಿ ನಿದ್ದೆ ಮಾಡಿತ್ತು. ನಂತರ ಏನಾಯ್ತು ಎಂಬುದು ಈಗ ಇತಿಹಾಸ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಗಮನ ಸೆಳೆದ ಟ್ವೀಟ್‌ಗಳ ಇಣುಕುನೋಟ ಇಲ್ಲಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.