ADVERTISEMENT

ನಕ್ಕು ಸುಸ್ತಾಗ್ತೀರಿ | ದೆಹಲಿ ಚುನಾವಣೆ, ಸಮಿಕ್ಷೆಗಳ ಬಗ್ಗೆ ಮೀಮ್ ಲೋಕದ ಸ್ಪಂದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2020, 2:14 IST
Last Updated 9 ಫೆಬ್ರುವರಿ 2020, 2:14 IST
ದೆಹಲಿ ವಿಧಾನಸಭಾ ಚುನಾವಣೆಗೆ ಸಾಮಾಜಿಕ ಮಾಧ್ಯಮಗಳ ಸ್ಪಂದನೆ
ದೆಹಲಿ ವಿಧಾನಸಭಾ ಚುನಾವಣೆಗೆ ಸಾಮಾಜಿಕ ಮಾಧ್ಯಮಗಳ ಸ್ಪಂದನೆ   

ದೆಹಲಿ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಶನಿವಾರ ಸಂಜೆ ಪ್ರಕಟವಾಗಿವೆ. ಬಹುತೇಕ ಸಮೀಕ್ಷೆಗಳುಆಮ್ ಆದ್ಮಿ ಪಕ್ಷಕ್ಕೆ (ಆಪ್) 50–61 ಸ್ಥಾನಗಳನ್ನು ಗಳಿಸಿ, ಜನಮನ್ನಣೆ ದಕ್ಕಿಸಿಕೊಳ್ಳುವ ಬಗ್ಗೆ ಭವಿಷ್ಯ ನುಡಿದಿವೆ. ಬಿಜೆಪಿಗೆ 10–16 ಸ್ಥಾನಗಳು ಸಿಗಬಹುದು, ಕಾಂಗ್ರೆಸ್‌ಗೆಮಾತ್ರ ಶೂನ್ಯ ನಿವಾರಣೆಯೇ ಸಾಧನೆಯಾದೀತುಎಂಬುದು ಸಮೀಕ್ಷೆಗಳ ಭವಿಷ್ಯದ ಸಾರ.

ದೆಹಲಿ ವಿಧಾನಸಭೆಯ ಮತದಾನದ ದಿನವಾದಶನಿವಾರ ಮುಂಜಾನೆಯಿಂದಲೇ ಮೂರೂ ಪಕ್ಷಗಳು ಮತ್ತು ಅವುಗಳ ಬೆಂಬಲಿಗರುಸಾಮಾಜಿಕ ಮಾಧ್ಯಮಗಳಲ್ಲಿ ಚಟುವಟಿಕೆ ಹೆಚ್ಚಿಸಿದರು.#ExitPoll ಮತ್ತು#DelhiAssemblyPolls ಹ್ಯಾಷ್‌ಟ್ಯಾಗ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗಿದ್ದವು. ಹಲವು ಬಾಲಿವುಡ್ ಚಿತ್ರಗಳ ಸಂಭಾಷಣೆಯ ತುಣುಕುಗಳಲ್ಲಿಬರುವ ‘ಆಪ್’ (ನೀವು) ಸಂಭಾಷಣೆಯನ್ನು ಆಮ್ ಆದ್ಮಿ ಪಕ್ಷ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದು ಎದ್ದು ಕಂಡ ಅಂಶ.

ದೆಹಲಿ ಚುನಾವಣೆಯಲ್ಲಿಬಿಜೆಪಿ–ಆಪ್ ನಡುವಣ ನೇರಜಿದ್ದಾಜಿದ್ದಿ ಹಲವು ಕಾರಣಗಳಿಂದಾಗಿ ದೇಶದ ಗಮನವನ್ನೂ ಸೆಳೆದಿತ್ತು. ‘ಯಾರು ಗೆದ್ದರು ಏನು’ ಎಂಬ ವ್ಯಾಖ್ಯಾನದಿಂದ ಹಿಡಿದು, ಈ ಚುನಾವಣೆ ಕೊಡುವ ಸಂದೇಶಗಳ ಬಗ್ಗೆಯೂ ವಿಶ್ಲೇಷಣೆಗಳು ಚಾಲ್ತಿಗೆ ಬಂದಿದ್ದವು.

ADVERTISEMENT

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೀಮ್‌ ಲೋಕದ ವಿಹಾರಿಗಳು ಇಂಥ ಘನಂದಾರಿ ಲೆಕ್ಕಾಚಾರಗಳನ್ನು ಬದಿಗಿಟ್ಟು ಹಾಸ್ಯದ ರಸಾಯನ ಉಣಬಡಿಸುತ್ತಿದ್ದಾರೆ. ಅಂಥ ಮೀಮ್‌ಗಳ ಲೋಕದಲ್ಲಿ ಒಂದು ಸುತ್ತು ಹಾಕಿಬರೋಣ ಬನ್ನಿ.

ಮೀಮ್ ಲೋಕದ ಝಲಕ್ ಇಲ್ಲಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.