ನವದೆಹಲಿ: ಸಾಮಾಜಿಕ ಮಾಧ್ಯಮ ಟ್ವಿಟರ್‌ನ ವೇರಿಫೈಡ್ ಖಾತೆಗಳ ‘ಬ್ಲೂ ಟಿಕ್’ಗೆ ಶುಲ್ಕ ವಿಧಿಸುವ ತಮ್ಮ ನಿಲುವನ್ನು ಸಂಸ್ಥೆಯ ಹೊಸ ಮಾಲೀಕ ಇಲಾನ್ ಮಸ್ಕ್ ಶನಿವಾರ ಮತ್ತೆ ಸಮರ್ಥಿಸಿಕೊಂಡಿದ್ದಾರೆ.
‘ಬ್ಲೂ ಟಿಕ್’ಗೆ 8 ಡಾಲರ್ ಶುಲ್ಕ ವಿಧಿಸುವ ಬಗ್ಗೆ ಸೆಲೆಬ್ರಿಟಿಗಳು ಸೇರಿದಂತೆ ಹಲವರು ಈಗಾಗಲೇ ಮಸ್ಕ್ ಅವರನ್ನು ಸಾಕಷ್ಟು ಟೀಕಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಅವರು, "ದಿನವಿಡಿ ನನ್ನ ವಿರುದ್ಧ ಪ್ರಲಾಪ ಮಾಡಿ. ಆದರೆ ಅದರ (ಬ್ಲೂ ಟಿಕ್) ಬೆಲೆ 8 ಡಾಲರ್’ ಎಂದು ಮಸ್ಕ್ ಶನಿವಾರ ಖಂಡತುಂಡವಾಗಿ ಹೇಳಿದರು.
ಜಾಹೀರಾತುದಾರರು ಹಣ ನಿಲ್ಲಿಸಿರುವ ಕಾರಣದಿಂದ ಟ್ವಿಟರ್ ಆದಾಯದಲ್ಲಿ ಭಾರಿ ಕುಸಿತವುಂಟಾಗಿದೆ ಎಂದು ಮಸ್ಕ್ ಈ ಹಿಂದೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.