ADVERTISEMENT

ಟ್ವಿಟರ್‌ನ ಸ್ಪೆಷಲ್ ಕಂಟೆಂಟ್‌ಗೆ ಬಳಕೆದಾರರಿಂದ ಪಾವತಿ ಯೋಜನೆ ಶೀಘ್ರ ಜಾರಿ?

ಏಜೆನ್ಸೀಸ್
Published 26 ಫೆಬ್ರುವರಿ 2021, 5:31 IST
Last Updated 26 ಫೆಬ್ರುವರಿ 2021, 5:31 IST
ಟ್ವಿಟರ್ ಪ್ರಾತಿನಿಧಿಕ ಚಿತ್ರ 
ಟ್ವಿಟರ್ ಪ್ರಾತಿನಿಧಿಕ ಚಿತ್ರ    

ಸ್ಯಾನ್ ಫ್ರಾನ್ಸಿಸ್ಕೊ: ಜನಪ್ರಿಯ ಜಾಲತಾಣ ಟ್ವಿಟರ್ ತನ್ನ ವೇದಿಕೆಯಲ್ಲಿ ಚಂದಾದಾರಿಕೆ ಸೇವೆಯನ್ನು ಆರಂಭಿಸಲು ಯೋಜಿಸಿದೆ. ಇದರಲ್ಲಿ ಬಳಕೆದಾರರು ಹೈಪ್ರೊಫೈಲ್ ಖಾತೆಗಳ ವಿಶೇಷ ಕಂಟೆಂಟ್‌ಗಳಿಗೆ ಪಾವತಿ ಮಾಡಬೇಕಾಗುತ್ತದೆ. ವಿವಿಧ ಮೂಲಗಳಿಂದ ಆದಾಯ ಗಳಿಕೆಯ ಮಾದರಿಯ ಭಾಗವಾಗಿ ಟ್ವಿಟರ್ ಈ ಯೋಜನೆ ರೂಪಿಸಿದೆ.

ಜಾಗತಿಕವಾಗಿ ಜನಪ್ರಿಯವಾಗಿರುವ ಸಾಮಾಜಿಕ ಮಾಧ್ಯಮ ಟ್ವಿಟರ್, ತನ್ನ ವಾರ್ಷಿಕ ಹೂಡಿಕೆದಾರರ ಸಭೆಯಲ್ಲಿ ಸಂಭಾವ್ಯ ಹೊಸ ಸೇವೆಗಳನ್ನು ಘೋಷಿಸಿದೆ. ಇದು ಸದ್ಯ ಇರುವ ಜಾಹೀರಾತನ್ನು ಮೀರಿ ಹೊಸ ಆದಾಯದ ಸ್ಟ್ರೀಮ್‌ಗಳನ್ನು ಹುಡುಕುತ್ತದೆ.

"ಸೂಪರ್ ಫಾಲೋಗಳಂತಹ ಯೋಜನೆಗಳು ಬಳಕೆದಾರರಿಂದ ಹಣ ಪಡೆಯುವ ಅವಕಾಶಗಳನ್ನು ಎಕ್ಸ್‌ಪ್ಲೋರ್ ಮಾಡುವುದರಿಂದ ಕಂಟೆಂಟ್ ಸೃಷ್ಟಿಕರ್ತರು ಮತ್ತು ಪ್ರಕಾಶಕರಿಗೆ ಅವರ ಪ್ರೇಕ್ಷಕರು ನೇರವಾಗಿ ಬೆಂಬಲಿಸಲು ಅವಕಾಶ ನೀಡುತ್ತದೆ. ಈ ಮೂಲಕ ಬಳಕೆದಾರರು ಇಷ್ಟಪಡುವ ಕಂಟೆಂಟ್ ರಚನೆ ಮುಂದುವರಿಸಲು ಅವರನ್ನು ಪ್ರೋತ್ಸಾಹಿಸುತ್ತದೆ" ಎಂದು ಟ್ವಿಟರ್ ವಕ್ತಾರರು ಎಎಫ್‌ಪಿಗೆ ತಿಳಿಸಿದ್ದಾರೆ.

ADVERTISEMENT

ಟ್ವಿಟರ್‌ನ ಉನ್ನತ ಮಟ್ಟದ ಸಭೆಯಲ್ಲಿ ಭವಿಷ್ಯದ ಗುರಿಗಳು ಮತ್ತು ಯೋಜನೆಗಳ ಪ್ರಸ್ತುತಿ ಸಂದರ್ಭ ಸೂಪರ್ ಫಾಲೋಗಳ ಬಗ್ಗೆ ಚರ್ಚಿಸಲಾಗಿದೆ.

"ನಾವು ನಮ್ಮ ಸೇವೆಗೆ ನೀಡುತ್ತಿರುವ ಇನ್ಸೆಂಟಿವ್ಸ್‌ಗಳನ್ನು ಮರುಪರಿಶೀಲಿಸುತ್ತಿದ್ದೇವೆ ಮತ್ತು ಪುನರ್ವಿಮರ್ಶಿಸುತ್ತಿದ್ದೇವೆ. ಟ್ವಿಟರ್‌ನಲ್ಲಿ ಜನರು ಪಾಲ್ಗೊಳ್ಳುವಿಕೆ ಆಧರಿಸಿ ನಮ್ಮ ಉತ್ಪನ್ನದ ವೈಶಿಷ್ಟ್ಯಗಳು ಪ್ರೋತ್ಸಾಹಿಸಲ್ಪಡುತ್ತವೆ" ಎಂದು ವಕ್ತಾರರು ಹೇಳಿದರು.

ಟ್ವಿಟರ್ ಬಳಕೆದಾರರು ಕಂಟೆಂಟ್ ರಚಿನೆಕಾರರನ್ನು ಆರ್ಥಿಕವಾಗಿ ಬೆಂಬಲಿಸುವ ಮತ್ತು ನ್ಯೂಸ್ ಲೆಟರ್ ಪಡೆಯುವ, ವಿಶೇಷ ಕಂಟೆಂಟ್ ಮತ್ತು ವಿನಿಮಯದಲ್ಲಿ ವರ್ಚುವಲ್ ಬ್ಯಾಡ್ಜ್‌ಗಳನ್ನು ಬಳಸುವ ವಿಷಯಗಳ ಕುರಿತಂತೆ ಪ್ರಸ್ತುತಿಯ ಸಮಯದಲ್ಲಿ ಟ್ವಿಟ್ಟರ್‌ನ ಸೂಪರ್ ಫಾಲೋಗಳನ್ನು ವಿವರಿಸಲಾಗಿದೆ.

ಪ್ರಸ್ತುತ ಜಾಹೀರಾತುಗಳು ಮತ್ತು ಪ್ರಚಾರದ ಪೋಸ್ಟ್‌ಗಳಿಂದ ಹಣ ಗಳಿಸುವ ಟ್ವಿಟರ್, ಸೂಪರ್ ಫಾಲೋಸ್‌ ವಹಿವಾಟಿನ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.