ADVERTISEMENT

ಡೆಸ್ಕ್‌ಟಾಪ್ ಟ್ವಿಟರ್ ಕಾರ್ಯಾಚರಣೆಗೆ ಅಡಚಣೆ: ಭಾರತ, ಜಪಾನ್ ಬಳಕೆದಾರರಿಗೆ ಸಮಸ್ಯೆ

ಏಜೆನ್ಸೀಸ್
Published 13 ಮಾರ್ಚ್ 2020, 7:56 IST
Last Updated 13 ಮಾರ್ಚ್ 2020, 7:56 IST
ಟ್ವಿಟರ್‌
ಟ್ವಿಟರ್‌    
""
""

ನವದೆಹಲಿ: ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಶುಕ್ರವಾರ ಟ್ವಿಟರ್‌ ಬಳಕೆದಾರರಿಗೆ ಟ್ವೀಟ್‌ಗಳನ್ನು ಎಂಬೆಡ್‌ ಮಾಡುವುದು, ಹಳೆಯ ಟ್ವೀಟ್‌ ಲೋಡ್‌ ಮಾಡುವುದು ಸಾಧ್ಯವಾಗದೆ ತೊಂದರೆ ಎದುರಿಸಿದ್ದಾರೆ.

ಡೆಸ್ಕ್‌ಟಾಪ್‌ಗಳಲ್ಲಿ ಟ್ವಿಟರ್‌ ಬಳಸುತ್ತಿರುವವರ ಪೈಕಿ ಶೇ 85ರಷ್ಟು ಟ್ವೀಟಿಗರಿಗೆ ಹಾಗೂ ಶೇ 8ರಷ್ಟು ಆ್ಯಂಡ್ರಾಯ್ಡ್‌ ಬಳಕೆದಾರರಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಟ್ವಿಟರ್‌ ಬಳಸುವುದೇ ಸಾಧ್ಯವಾಗಿಲ್ಲ ಎಂದು ಹೆಚ್ಚಿನ ಜನರು ವರದಿ ಮಾಡಿರುವುದಾಗಿ 'ಡೌನ್‌ಡಿಟೆಕ್ಟರ್‌' ವೆಬ್‌ಸೈಟ್‌ ಅಂಕಿ–ಅಂಶಗಳಿಂದ ತಿಳಿದು ಬಂದಿದೆ.

ಬೆಂಗಳೂರು, ದೆಹಲಿ, ಹೈದರಾಬಾದ್‌, ಮುಂಬೈ ಹಾಗೂ ಚೆನ್ನೈನ ಬಹುತೇಕ ಬಳಕೆದಾರರಿಗೆ ಟ್ವಿಟರ್‌ ಕಾರ್ಯಾಚರಣೆ ಸಾಧ್ಯವಾಗಿಲ್ಲ. ಜಪಾನ್‌, ಫಿಲಿಪ್ಪೀನ್ಸ್‌, ಮಲೇಷ್ಯಾ ಹಾಗೂ ಇಂಡೋನೇಷ್ಯಾದಲ್ಲೂ ಟ್ವಿಟರ್‌ ಕಾರ್ಯಾಚರಣೆಗೆ ಅಡಚಣೆಯಾಗಿದೆ.

ADVERTISEMENT

ಫೆಬ್ರುವರಿ ಮಧ್ಯ ಭಾಗದಲ್ಲಿ ಭಾರತದಲ್ಲಿ ಟ್ವಿಟರ್ ಬಳಕೆ ಅಡಚಣೆ ಎದುರಾಗಿತ್ತು. ಕೊರೊನಾ ವೈರಸ್‌ ಸೋಂಕು ಆತಂಕ ಇರುವುದರಿಂದ ಟ್ವಿಟರ್‌ ತನ್ನ 5,000 ಸಿಬ್ಬಂದಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.