ADVERTISEMENT

ದೇಶದಲ್ಲಿ 23 ಲಕ್ಷಕ್ಕೂ ಅಧಿಕ ವಾಟ್ಸ್‌ಆ್ಯಪ್ ಖಾತೆಗಳಿಗೆ ಆಗಸ್ಟ್‌ನಲ್ಲಿ ನಿಷೇಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2022, 6:07 IST
Last Updated 2 ಅಕ್ಟೋಬರ್ 2022, 6:07 IST
   

ಬೆಂಗಳೂರು: ಮೆಟಾ ಒಡೆತನದ ವಾಟ್ಸ್‌ಆ್ಯಪ್, ದೇಶದಲ್ಲಿ 23 ಲಕ್ಷಕ್ಕೂ ಅಧಿಕ ಖಾತೆಗಳಿಗೆ ಆಗಸ್ಟ್‌ನಲ್ಲಿ ನಿಷೇಧ ಹೇರಿದೆ.

ವಾಟ್ಸ್‌ಆ್ಯಪ್ ನಿಯಮಗಳನ್ನು ಪಾಲಿಸದ ಮತ್ತು ಸರ್ಕಾರದ ನಿಬಂಧನೆಗಳನ್ನು ಉಲ್ಲಂಘಿಸಿದ ಖಾತೆಗಳ ವಿರುದ್ಧ ಕಂಪನಿ ಸೂಕ್ತ ಕ್ರಮ ಕೈಗೊಂಡಿದೆ.

ಕಳೆದ ಆಗಸ್ಟ್ ತಿಂಗಳೊಂದರಲ್ಲಿಯೇ 23,28,000 ವಾಟ್ಸ್‌ಆ್ಯಪ್ ಖಾತೆಗಳಿಗೆ ನಿಷೇಧ ಹೇರಲಾಗಿದೆ. ಆ ಪೈಕಿ, 10,08,000 ಖಾತೆಗಳನ್ನು ಮುಂಜಾಗ್ರತಾ ಕ್ರಮವಾಗಿ ನಿಷೇಧಿಸಲಾಗಿದೆ.

ADVERTISEMENT

ವಾಟ್ಸ್‌ಆ್ಯಪ್, ದೇಶದಲ್ಲಿ ನಕಲಿ ಮತ್ತು ದ್ವೇಷ ಬಿತ್ತುವ ಹಾಗೂ ನಿಬಂಧನೆಗಳನ್ನು ಪಾಲಿಸದ ಖಾತೆಗಳ ವಿರುದ್ಧ ನಿರಂತರ ಕ್ರಮ ಕೈಗೊಳ್ಳುತ್ತಿದೆ ಎಂದು ಮೆಟಾ ಹೇಳಿದೆ.

ಸರ್ಕಾರದ ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘಿಸುವ ಖಾತೆಗಳ ವಿರುದ್ಧವೂ ಸೂಕ್ತ ಕ್ರಮಗಳನ್ನು ಎಲ್ಲ ಸಾಮಾಜಿಕ ತಾಣಗಳು ಕೈಗೊಳ್ಳುತ್ತಿವೆ. 2022ರ ಜೂನ್‌ನಲ್ಲಿ 22 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳನ್ನು ವಾಟ್ಸ್‌ಆ್ಯಪ್ ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.