ADVERTISEMENT

ವಾಟ್ಸ್‌ಆ್ಯಪ್ ಬ್ಯುಸಿನೆಸ್ ಆ್ಯಪ್: ಶಾಪಿಂಗ್ ಆಯ್ಕೆ ಲಭ್ಯ

ವಾಟ್ಸ್ಆ್ಯಪ್ ಬ್ಯುಸಿನೆಸ್ ಆವೃತ್ತಿಯಲ್ಲಿ ಬಳಕೆದಾರರಿಗೆ ವಿವಿಧ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2022, 13:30 IST
Last Updated 20 ನವೆಂಬರ್ 2022, 13:30 IST
   

ಬೆಂಗಳೂರು: ಮೆಟಾ ಒಡೆತನದ ವಾಟ್ಸ್‌ಆ್ಯ‍ಪ್, ಬ್ಯುಸಿನೆಸ್ ಆವೃತ್ತಿಯಲ್ಲಿ ಹಲವು ಹೊಸ ಫೀಚರ್‌ಗಳನ್ನು ಪರಿಚಯಿಸಿದೆ.

ಬಳಕೆದಾರರು ವಾಟ್ಸ್‌ಆ್ಯಪ್ ಬ್ಯುಸಿನೆಸ್ ಆವೃತ್ತಿಯಲ್ಲಿ ಶಾಪಿಂಗ್ ಮಾಡಲು ಅನುಕೂಲವಾಗುವಂತೆ, ಸರ್ಚ್ ಆಯ್ಕೆಯನ್ನು ಒದಗಿಸಲಾಗಿದೆ. ಜತೆಗೆ ಶಾಪಿಂಗ್ ತಾಣಗಳ ಜತೆ ಚಾಟ್ ಮಾಡಲು, ಉತ್ಪನ್ನಗಳನ್ನು ಖರೀದಿಸಲು ಅವಕಾಶವಿದೆ ಎಂದು ಕಂಪನಿ ಹೇಳಿದೆ.

ಆರಂಭಿಕ ಹಂತದಲ್ಲಿ ಬ್ರೆಜಿಲ್, ಕೊಲಂಬಿಯಾ, ಇಂಡೋನೇಷ್ಯಾ, ಮೆಕ್ಸಿಕೊ ಮತ್ತು ಇಂಗ್ಲೆಂಡ್‌ನಲ್ಲಿ ಮಾತ್ರ ಹೊಸ ಫೀಚರ್ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಭಾರತ ಸಹಿತ ಇತರ ರಾಷ್ಟ್ರಗಳಲ್ಲೂ ಲಭ್ಯವಾಗಲಿದೆ.

ADVERTISEMENT

ಈ ಮೊದಲು ವಾಟ್ಸ್ಆ್ಯಪ್ ಬ್ಯುಸಿನೆಸ್ ಆವೃತ್ತಿ ಮೂಲಕ ಕಂಪನಿಗಳ ವೆಬ್‌ಸೈಟ್‌ಗೆ ಭೇಟಿ ನೀಡಿ, ಅದರ ಮೂಲಕ ಖರೀದಿಸುವ ಆಯ್ಕೆ ನೀಡಲಾಗುತ್ತಿತ್ತು. ಮುಂದೆ, ವಾಟ್ಸ್‌ಆ್ಯಪ್ ಮೂಲಕವೇ ಶಾಪಿಂಗ್ ಮಾಡಲು ಅವಕಾಶ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.