ADVERTISEMENT

ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಪರಿಚಯಿಸಿದ ವಾಟ್ಸ್‌ಆ್ಯಪ್

ಐಎಎನ್ಎಸ್
Published 8 ಆಗಸ್ಟ್ 2023, 14:47 IST
Last Updated 8 ಆಗಸ್ಟ್ 2023, 14:47 IST
   

ನವದೆಹಲಿ: ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಸಕ್ರಿಯಗೊಳಿಸಲಾಗಿದೆ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಮಂಗಳವಾರ ಹೇಳಿದ್ದಾರೆ.

ವಿಡಿಯೊ ಕಾಲ್ ವೇಳೆ ಬಳಕೆದಾರರು, 'ಶೇರಿಂಗ್' ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ನಿರ್ದಿಷ್ಟ ಅಪ್ಲಿಕೇಶನ್ ಅಥವಾ ಸಂಪೂರ್ಣ ಪರದೆಯನ್ನು ಹಂಚಿಕೊಳ್ಳುವ ಆಯ್ಕೆ ಮಾಡುವ ಮೂಲಕ ಸ್ಕ್ರೀನ್ ಹಂಚಿಕೆಯನ್ನು ಪ್ರಾರಂಭಿಸಬಹುದು ಎಂದು ಅವರು ತಿಳಿಸಿದ್ದಾರೆ.

‘ಕೆಲಸದ ನಿಮಿತ್ತ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುವುದು, ಕುಟುಂಬದೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳುವುದು, ರಜೆ ಕುರಿತು ಯೋಜಿಸುವುದು ಅಥವಾ ಸ್ನೇಹಿತರೊಂದಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಮುಂತಾದ ಸಂದರ್ಭ ವಿಡಿಯೊ ಕರೆ ಸಮಯದಲ್ಲಿ ನಿಮ್ಮ ಪರದೆಯ ಲೈವ್ ವೀಕ್ಷಣೆಯನ್ನು ಹಂಚಿಕೊಳ್ಳಲು ಸ್ಕ್ರೀನ್ ಶೇರಿಂಗ್ ಫೀಚರ್ ನಿಮಗೆ ಅನುಮತಿಸುತ್ತದೆ’ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

WhatsApp ಬಳಕೆದಾರರು ಸ್ಮಾರ್ಟ್‌ಫೋನ್‌ಗಳಲ್ಲಿ ವಿಶಾಲವಾದ ಮತ್ತು ಮತ್ತಷ್ಟು ಉತ್ತಮ ಅನುಭವಕ್ಕಾಗಿ ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ವಿಡಿಯೊ ಕರೆಗಳನ್ನು ಮಾಡಬಹುದು.

ನವೆಂಬರ್ 2016ರಿಂದ ಎಲ್ಲ ಬಳಕೆದಾರರಿಗೆ ವಾಟ್ಸ್‌ಆ್ಯಪ್ ವಿಡಿಯೊ ಕರೆ ಫೀಚರ್ ಅನ್ನು ಪರಿಚಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.