ADVERTISEMENT

WhatsApp: ಶೀಘ್ರದಲ್ಲೇ ಗ್ರೂಪ್ ಸದಸ್ಯರ ಮಿತಿ ದುಪ್ಪಟ್ಟು

ವಾಟ್ಸ್‌ಆ್ಯಪ್, ಗ್ರೂಪಿನ ಸದಸ್ಯರ ಮಿತಿಯನ್ನು ದುಪ್ಪಟ್ಟು ಮಾಡಲಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2022, 14:29 IST
Last Updated 11 ಅಕ್ಟೋಬರ್ 2022, 14:29 IST
   

ಬೆಂಗಳೂರು: ಹೊಸ ಹೊಸ ಅಪ್‌ಡೇಟ್‌ಗಳನ್ನು ಕಾಲಕಾಲಕ್ಕೆ ನೀಡುವ ಮೂಲಕ ವಾಟ್ಸ್‌ಆ್ಯಪ್ ಬಳಕೆದಾರರಿಗೆ ನೂತನ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.

ವಾಟ್ಸ್‌ಆ್ಯಪ್ ಗ್ರೂಪ್ ಸದಸ್ಯರ ಮಿತಿಯನ್ನು ಈ ಮೊದಲು ಇದ್ದ 256 ಬದಲಾಗಿ 512ಕ್ಕೆ ಏರಿಕೆ ಮಾಡಿತ್ತು. ಈ ಬಾರಿ ಅದನ್ನು ದುಪ್ಪಟ್ಟು ಮಾಡಲು ಕಂಪನಿ ಮುಂದಾಗಿದೆ. ಅದರ ಪ್ರಕಾರ, ವಾಟ್ಸ್‌ಆ್ಯಪ್ ಗ್ರೂಪ್ ಸದಸ್ಯರ ಮಿತಿ ಇನ್ನು ಮುಂದೆ 1024 ಆಗಲಿದೆ.

ಈ ಕುರಿತು ವಾಬೀಟಾಇನ್ಫೋ ವರದಿ ಮಾಡಿದ್ದು, ನೂತನ ವೈಶಿಷ್ಟ್ಯವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ನೂತನ ಅಪ್‌ಡೇಟ್ ದೊರೆಯಲಿದೆ.

ADVERTISEMENT
ವಾಬೀಟಾಇನ್ಫೋ ವರದಿ

ಗ್ರೂಪ್ ನಿಯಂತ್ರಣ ಕುರಿತು ಅಡ್ಮಿನ್‌ಗಳಿಗೆ ಈಗಾಗಲೇ ಹಲವು ಅಧಿಕಾರಗಳನ್ನು ನೀಡಲಾಗಿದೆ. ಜತೆಗೆ, ಬಳಕೆದಾರರ ಖಾಸಗಿತನ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.