ADVERTISEMENT

ವಾಟ್ಸ್‌ಆ್ಯಪ್ ‘ವ್ಯೂ ಒನ್ಸ್‘ ಫೋಟೊ–ವಿಡಿಯೊ ಸ್ಕ್ರೀನ್‌ಶಾಟ್‌ಗೆ ಶೀಘ್ರ ನಿರ್ಬಂಧ

ಬಳಕೆದಾರರ ಖಾಸಗಿತನ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ವಾಟ್ಸ್‌ಆ್ಯಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2022, 6:10 IST
Last Updated 6 ಅಕ್ಟೋಬರ್ 2022, 6:10 IST
ವಾಬೀಟಾಇನ್ಫೋ ವರದಿ
ವಾಬೀಟಾಇನ್ಫೋ ವರದಿ    

ಬೆಂಗಳೂರು: ಬಳಕೆದಾರರು ಫೋಟೊ ಮತ್ತು ವಿಡಿಯೊ ಕಳುಹಿಸುವಾಗ, ಗ್ಯಾಲರಿಯಲ್ಲಿ ಸೇವ್ ಆಗದೇ, ಬರೇ ನೋಡಲಷ್ಟೇ ಸಾಧ್ಯವಾಗುವ ‘ವ್ಯೂ ಒನ್ಸ್‘ ಆಯ್ಕೆಯನ್ನು ವಾಟ್ಸ್‌ಆ್ಯಪ್ ಪರಿಚಯಿಸಿತ್ತು.

ಆದರೆ, ಈಗ ಇರುವ ಆಯ್ಕೆಯಲ್ಲಿ ಬಳಕೆದಾರರು ‘ವ್ಯೂ ಒನ್ಸ್‘ ಫೋಟೊಗಳನ್ನು ಸ್ಕ್ರೀನ್ ಶಾಟ್ ತೆಗೆಯಲು ಹಾಗೂ ವಿಡಿಯೊಗಳನ್ನು ಸ್ಕ್ರೀನ್ ರೆಕಾರ್ಡಿಂಗ್ ಮಾಡಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಅವುಗಳ ದುರುಪಯೋಗವಾಗುವ ಅಪಾಯವೂ ಇದೆ.

ಮುಂದೆ, ವ್ಯೂ ಒನ್ಸ್ ಫೋಟೊ ಮತ್ತು ವಿಡಿಯೊಗಳ ಸ್ಕ್ರೀನ್‌ಶಾಟ್ ಮತ್ತು ವಿಡಿಯೊ ರೆಕಾರ್ಡಿಂಗ್ ಮಾಡಲು ಸಾಧ್ಯವಾಗದೇ ಇರುವಂತೆ ಹೊಸ ಭದ್ರತಾ ಅಪ್‌ಡೇಟ್ ಅನ್ನು ವಾಟ್ಸ್‌ಆ್ಯಪ್ ಶೀಘ್ರದಲ್ಲೇ ಬಳಕೆದಾರರಿಗೆ ಒದಗಿಸಲಿದೆ.

ADVERTISEMENT

ಈ ಕುರಿತ ಬೀಟಾ ಆವೃತ್ತಿಯನ್ನು ವಾಟ್ಸ್‌ಆ್ಯಪ್ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಐಫೋನ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಹೊಸ ಅಪ್‌ಡೇಟ್ ದೊರೆಯಲಿದೆ. ಈ ಕುರಿತು ವಾಬೀಟಾಇನ್ಫೋ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.