ADVERTISEMENT

ಪ್ರಶ್ನೆಗಳಿಗೆ ಉತ್ತರಿಸಲು ವಾಟ್ಸ್ ‌ಆ್ಯಪ್‌ ಸಿದ್ಧ

ಪಿಟಿಐ
Published 20 ಜನವರಿ 2021, 15:30 IST
Last Updated 20 ಜನವರಿ 2021, 15:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಖಾಸಗಿತನಕ್ಕೆ ಸಂಬಂಧಿಸಿದ ನೀತಿಯಲ್ಲಿನ ಪ್ರಸ್ತಾವಿತ ಬದಲಾವಣೆಯು ಬಳಕೆದಾರರ ಮಾಹಿತಿಯನ್ನುಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವ ತನ್ನ ಸಾಮರ್ಥ್ಯವನ್ನು ಹೆಚ್ಚಿಸುವುದಿಲ್ಲ ಎಂದು ವಾಟ್ಸ್‌ ಆ್ಯಪ್‌ ಹೇಳಿದೆ. ಈ ವಿಷಯವಾಗಿ ಯಾವುದೇ ಪ್ರಶ್ನೆಗೂ ಉತ್ತರಿಸಲು ತಾನು ಸಿದ್ಧ ಎಂದು ಅದು ಹೇಳಿದೆ.

ಖಾಸಗಿತನಕ್ಕೆ ಸಂಬಂಧಿಸಿದ ನೀತಿಯಲ್ಲಿನ ಪ್ರಸ್ತಾವಿತ ಬದಲಾವಣೆಗಳನ್ನು ಕೈಬಿಡುವಂತೆ ಕೇಂದ್ರ ಸರ್ಕಾರವು ವಾಟ್ಸ್ ‌ಆ್ಯಪ್‌ಗೆ ಮಂಗಳವಾರ ಸೂಚನೆ ನೀಡಿದೆ. ಹೊಸ ನಿಯಮದ ಕುರಿತಾಗಿ ವಾಟ್ಸ್ಆ್ಯಪ್‌ ಮುಂದೆ 14 ಪ್ರಶ್ನೆಗಳನ್ನು ಇರಿಸಿದೆ. ಇದಾದ ಬಳಿಕ ವಾಟ್ಸ್‌ ಆ್ಯಪ್‌ ಈ ಹೇಳಿಕೆ ನೀಡಿದೆ.

‘ಉದ್ಯಮಗಳು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮತ್ತು ಅವು ಬೆಳವಣಿಗೆ ಸಾಧಿಸಲು ಅನುಕೂಲ ಆಗುವಂತೆ ಪಾರದರ್ಶಕತೆ ಮತ್ತು ಹೊಸ ಆಯ್ಕೆಗಳನ್ನು ಒದಗಿಸುವುದು ನಮ್ಮ ಉದ್ದೇಶ’ ಎಂದು ವಾಟ್ಸ್‌ ಆ್ಯಪ್‌ನ ವಕ್ತಾರರೊಬ್ಬರು ಹೇಳಿದ್ದಾರೆ.

ADVERTISEMENT

‘ವಾಟ್ಸ್‌ ಆ್ಯಪ್‌ ಮೂಲಕ ನಡೆಯುವ ವೈಯಕ್ತಿಕ ಸಂವಹನಗಳು ಯಾವಾಗಲೂ ಖಾಸಗಿಯಾಗಿಯೇ ಇರಲಿವೆ. ವಾಟ್ಸ್‌ ಆ್ಯಪ್‌ ಅಥವಾ ಫೇಸ್‌ಬುಕ್‌ ಆ ಸಂದೇಶಗಳನ್ನು ನೋಡಲು ಆಗುವುದಿಲ್ಲ’ ಎಂದೂ ತಿಳಿಸಿದ್ದಾರೆ.

‘ತಪ್ಪು ತಿಳಿವಳಿಕೆ ದೂರವಾಗಿಸುವ ಪ್ರಯತ್ನ ನಡೆಸಲಾಗುತ್ತಿದ್ದು, ಈ ಸಂಬಂಧ ಯಾವುದೇ ಪ್ರಶ್ನೆಗೂ ಉತ್ತರಿಸಲು ಸಿದ್ಧರಿದ್ದೇವೆ’ ಎಂದಿದ್ದಾರೆ.

ವಾಟ್ಸ್ ‌ಆ್ಯಪ್‌ನ ಹೊಸ ನೀತಿಯ ಬಗ್ಗೆ ಜಾಗತಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹೀಗಾಗಿ ಅದನ್ನು ಜಾರಿಗೆ ತರುವ ದಿನಾಂಕವನ್ನು ಮೇ 15ಕ್ಕೆ ಮುಂದೂಡಲಾಗಿದೆ. ನೀತಿಯನ್ನು ಫೆಬ್ರುವರಿ 8ರಿಂದ ಜಾರಿಗೆ ತರುವ ಉದ್ದೇಶವನ್ನು ವಾಟ್ಸ್‌ ಆ್ಯಪ್‌ ಈ ಮೊದಲು ಹೊಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.