ADVERTISEMENT

ಕ್ಯಾನ್ಸರ್ ಕೈಗೆ ನಾನು ಸಿಗಲಿಲ್ಲ; ಇದು ಮಮ್ತಾ ಮೋಹನ್‍ದಾಸ್ ಚಾಲೆಂಜ್ 

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 14:44 IST
Last Updated 4 ಫೆಬ್ರುವರಿ 2019, 14:44 IST
   

ತಿರುವನಂತಪುರಂ: ವಿಶ್ವ ಕ್ಯಾನ್ಸರ್ ದಿನದಂದು ನಟಿ, ಗಾಯಕಿ ಮಮ್ತಾ ಮೋಹನ್ ದಾಸ್ ಇನ್‍ಸ್ಟಾಗ್ರಾಂನಲ್ಲಿ
ಪ್ರಕಟಿಸಿರುವ ಅನುಭವ ಕಥನ ವೈರಲ್ ಆಗಿದೆ.

ಕ್ಯಾನ್ಸರ್ ಪೀಡಿತರಾದಾಗತಲೆ ಬೋಳಿಸಿಕೊಂಡ ಚಿತ್ರ ಮತ್ತು10 ವರ್ಷದ ನಂತರದ ಚಿತ್ರವನ್ನು#10YearChallenge ಎಂದು ಶೇರ್ ಮಾಡಿರುವ ಮಮ್ತಾ, ಆತ್ಮವಿಶ್ವಾಸದ ಬರಹವೊಂದನ್ನು ಪ್ರಕಟಿಸಿದ್ದಾರೆ.

ಮಮ್ತಾ ಬರಹ ಹೀಗಿದೆ
ಇಂದು ವಿಶ್ವ ಕ್ಯಾನ್ಸರ್ ದಿನ.ನನ್ನ 10 YearChallenge ಫೋಟೊವನ್ನು ಇಲ್ಲಿ ಶೇರ್ ಮಾಡಲು ಈ ದಿನಕ್ಕಾಗಿ ನಾನು ಕಾದಿದ್ದೆ, ನನಗೆ ಕ್ಯಾನ್ಸರ್ ಬಂತು, ಆದರೆ ಕ್ಯಾನ್ಸರ್ ಕೈಗೆ ನಾನು ಸಿಗಲಿಲ್ಲ.

ADVERTISEMENT

ನನ್ನ ಬದುಕನ್ನೇ ಬದಲಿಸಿ ವರ್ಷವಾಗಿತ್ತು 2009.ನನ್ನ ಹಾಗೂ ನನ್ನ ಕುಟುಂಬದ ಎಲ್ಲ ಯೋಚನೆಗಳನ್ನು ಬುಡಮೇಲು ಮಾಡಿದ ವರ್ಷ. ಕಳೆದ ಹತ್ತು ವರ್ಷಗಳ ಬಗ್ಗೆ ಹಿಂತಿರುಗಿ ನೋಡಿದಾಗ ನಾನು ಅದೆಷ್ಟು ಹೋರಾಟ ಮಾಡಿದ್ದೇನೆ ಎಂಬುದು ತಿಳಿಯುತ್ತದೆ. ಎಲ್ಲವನ್ನೂ ಧೈರ್ಯದಿಂದ ಎದುರಿಸಿದೆ.

ಆಶಾವಾದದಿಂದ ಇಷ್ಟು ವರ್ಷ ಕಳೆದದ್ದು ಕಷ್ಟವೇ, ಆದರೆ ನಾನು ಅದನ್ನು ಸಾಧಿಸಿದೆ. ಇದಕ್ಕೆಲ್ಲಾ ಕಾರಣ ಕೆಲವು ಮಂದಿ.ಮೊದಲನೆಯದಾಗಿ ನಾನು ನನ್ನ ಅಪ್ಪ ಮತ್ತು ಅಮ್ಮನಿಗೆ ಧನ್ಯವಾದ ಹೇಳುತ್ತೇನೆ.ಸಹೋದರರ ಪ್ರೀತಿ ತಂದ ನನ್ನ ಕಸಿನ್‍ಗಳು. ನಾನು ನಿಜವಾಗಿಯೂ ಗುಣಮುಖವಾಗಿದ್ದೇನಾ ಅಥವಾ ನಟಿಸುತ್ತಿದ್ದೇನಾ ಎಂದು ನಿರಂತರವಾಗಿ ವಿಚಾರಿಸುತ್ತಿದ್ದನನ್ನ ಪ್ರೀತಿಯ ಗೆಳೆಯರು. ನನ್ನೊಂದಿಗೆ ನಿಂತ ನನ್ನ ಸಹೋದ್ಯೋಗಿಗಳು. ಅವರು ನನಗೆ ನೀಡಿದ ಅವಕಾಶಗಳನ್ನು ನಾನು ಈ ವೇಳೆ ಸ್ಮರಿಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.