ADVERTISEMENT

ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭ: ರೈತರಿಗೆ ಬೆಂಬಲ ಸೂಚಿಸಿದ ಲಿಲ್ಲಿ ಸಿಂಗ್‌

YouTuber Lilly Singh's Pro-Farmers Message At The Grammys Red Carpet

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 7:47 IST
Last Updated 15 ಮಾರ್ಚ್ 2021, 7:47 IST
ಲಿಲ್ಲಿ ಸಿಂಗ್
ಲಿಲ್ಲಿ ಸಿಂಗ್   

ಲಾಸ್‌ ಎಂಜಲಿಸ್‌: ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಯುಟ್ಯೂಬರ್‌ ಲಿಲ್ಲಿ ಸಿಂಗ್‌ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಮೂಲಕ ಗಮನ ಸೆಳೆದಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಲಿಲ್ಲಿ ಸಿಂಗ್‌, ಮಾಸ್ಕ್‌ ಧರಿಸಿದ್ದು ಅದರ ಮೇಲೆ ನಾನು ರೈತರ ಪರವಾಗಿದ್ದೇನೆ (#IStandWithFarmers) ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದ್ದಾರೆ.

ಲಿಲ್ಲಿ ಸಿಂಗ್‌ ಮೂಲತಹ ಭಾರತದವರು. ಪ್ರಸ್ತುತ ಅವರ ಕುಟುಂಬ ಕೆನಡಾದಲ್ಲಿ ನೆಲೆಸಿದ್ದು ಅವರು ಆ ದೇಶದ ಪೌರತ್ವ ಪಡೆದಿದ್ದಾರೆ. ಲಿಲ್ಲಿ ಸಿಂಗ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ಯುಟ್ಯೂಬರ್‌ ಹಾಗೂ ಕಂಟೆಂಟ್‌ ರೈಟರ್‌ ಎಂದೇ ಹೆಸರುಗಳಿಸಿದ್ದಾರೆ.

ADVERTISEMENT

ಲಿಲ್ಲಿ ಸಿಂಗ್‌ ಅವರು 90 ಲಕ್ಷ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹಾಗೂ 1.40 ಕೋಟಿ ಯುಟ್ಯೂಬ್‌ ಸಬ್‌ಸ್ಕ್ರೈಬರ್ಸ್‌ಗಳನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.