ADVERTISEMENT

ಮಾಹಿತಿ ಕಣಜ ಅಂತರ್ಜಾಲಕ್ಕೆ 50 ವರ್ಷ

ಪೃಥ್ವಿರಾಜ್ ಎಂ ಎಚ್
Published 29 ಅಕ್ಟೋಬರ್ 2019, 19:45 IST
Last Updated 29 ಅಕ್ಟೋಬರ್ 2019, 19:45 IST
ಅಂತರ್ಜಾಲ
ಅಂತರ್ಜಾಲ   

ಅಲ್ಲಿ ಏನಿದೆ ಎಂದು ಕೇಳುವುದಕ್ಕಿಂತ ಎನಿಲ್ಲ ಅಂದುಕೊಳ್ಳುವುದೇ ಹೆಚ್ಚು ಸೂಕ್ತ. ಮಕ್ಕಳ ಹೋಂ ವರ್ಕ್‌ನಿಂದ ಹಿಡಿದು, ಜೀವನದ ನಾನಾ ಕಾಲಘಟ್ಟಗಳಲ್ಲಿ ಧುತ್ತನೆ ಎದುರಾಗುವ ಪ್ರತಿ ಸಂದೇಹಕ್ಕೂ ಅಲ್ಲಿ ಉತ್ತರವೊಂದು ಇದ್ದೇ ಇರುತ್ತದೆ. ಸರಿಯೊ, ತಪ್ಪೊ ಎನ್ನುವುದು ಬೇರೆ ವಿಚಾರ. ಆದರೆ, ಅಂತರ್ಜಾಲವೆಂಬುದು ಆಮ್ಲಜನಕದಂತೆ. ಅದಿಲ್ಲದೇ ಬದುಕುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ಸೃಷ್ಟಿಯಾಗಿದೆ.

ಇಷ್ಟೆಲ್ಲ ಮಾಹಿತಿಯ ಭಂಡಾರವನ್ನೇ ಇಟ್ಟುಕೊಂಡು ಬೆಳೆಯುತ್ತಿರುವ ಅಂತರ್ಜಾಲವೆಂಬ ದೈತ್ಯನಿಗೆ 50 ವರ್ಷ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅಂತರರಾಷ್ಟ್ರೀಯ ಅಂತರ್ಜಾಲ ದಿನವನ್ನು 2005ರಿಂದ ವಿಶ್ವದಾದ್ಯಂತ ಅಕ್ಟೋಬರ್ 29ರಂದು ಆಚರಿಸಲಾಗುತ್ತದೆ. 1969ರ ಅಕ್ಟೋಬರ್‌ 29ರಂದು ಅಮೆರಿಕದ ಕ್ಯಾಲಿಫೋರ್ನಿಯಾದ ದೂರಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿಯಾಯಿತು. ಒಂದು ಕಂಪ್ಯೂಟರ್‌ನಿಂದ ಮತ್ತೊಂದು ಕಂಪ್ಯೂಟರ್‌ಗೆ ಮೊದಲ ಬಾರಿಗೆ ವಿದ್ಯುನ್ಮಾನ ಸಂದೇಶವನ್ನು ಯಶಸ್ವಿಯಾಗಿ ಕಳುಹಿಸಲಾಯಿತು. ಈ ಸಾಧನೆಯನ್ನು ಸ್ಮರಿ
ಸುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.

ADVERTISEMENT

ಈ ಮಹತ್ತರ ಸಂಶೋಧನೆ ಮಾಡಿದ್ದು ಅಮೆರಿಕದ ರಕ್ಷಣಾ ಇಲಾಖೆ ‘ಅಡ್ವಾನ್ಸ್‌ಡ್‌ ರಿಸರ್ಚ್ ಪ್ರಾಜೆಕ್ಟ್ ಏಜೆನ್ಸಿ ನೆಟ್‌ವರ್ಕ್‌’ (ARPANET). ಹೀಗಾಗಿಯೇ ಅಂತರ್ಜಾಲವನ್ನು ಆರಂಭದಲ್ಲಿ ಆರ್ಪಾನೆಟ್ ಎಂದು ಕರೆಯುತ್ತಿದ್ದರು.

ತಂತ್ರಾಂಶ ರೂಪಿಸುವ ಚಾರ್ಲಿ ಕ್ಲೈನ್ ಎಂಬ ವಿದ್ಯಾರ್ಥಿರೊಫೆಸರ್ ಲಿಯೊನಾರ್ಡ್‌ ಕ್ಲೀನ್‌ರಾಕ್‌ ಅವರ ಮಾರ್ಗದರ್ಶನದಲ್ಲಿ, ಯುಸಿಎಲ್‌ಎ ಸಂಸ್ಥೆಯಲ್ಲಿದ್ದ ಕಂಪ್ಯೂಟರ್‌ನಿಂದ, ಸ್ಟ್ಯಾನ್‌ಫೋರ್ಡ್ ರಿಸರ್ಚ್ ಇನ್‌ಸ್ಟಿಟ್ಯೂಷನ್‌ನಲ್ಲಿ ಇದ್ದ ಕಂಪ್ಯೂಟರ್‌ಗೆ ‘Login’ ಎಂಬ ಸಂದೇಶವನ್ನು ಕಳುಹಿಸಿದರು.

ಈ ಪ್ರಯೋಗದ ನಂತರ ಹಲವು ಸಂಶೋಧನೆಗಳು ನಡೆದವು. ಈ ಎಲ್ಲ ಸಂಶೋಧನೆಗಳ ಪರಿಣಾಮ ಕ್ಷಣಮಾತ್ರದಲ್ಲಿ ಸಂದೇಶವಷ್ಟೇ ಅಲ್ಲದೇ, ಚಿತ್ರಗಳು, ವಿಡಿಯೊಗಳು, ಸುದ್ದಿಗಳನ್ನು ಕಳುಹಿಸುವ ಸೌಲಭ್ಯ ಬಂದಿದೆ. ಪ್ರಸ್ತುತ ಅಂತರ್ಜಾಲವಿಲ್ಲದ ಜೀವನ ಊಹಿಸಿಕೊಳ್ಳುವುದು ಕಷ್ಟ.

ಅಂತರ್ಜಾಲ ಬಳಕೆಗೆ ಬಂದ 20 ವರ್ಷಗಳ ನಂತರ, ಅಂದರೆ 1989ರಲ್ಲಿ ವರ್ಲ್ಡ್‌ ವೈಡ್‌ ವೆಬ್‌ (WWW) ಬಳಕೆಗೆ ಬಂತು. ಇದನ್ನು ಟಿಮ್‌ ಬರ್ನ್‌ರ್ಸ್‌ ಲೀ ಎಂಬ ಸಂಶೋಧಕ ಬಳಕೆಗೆ ತಂದರು. ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕುವಾಗ ‘WWW' ಎಂದು ಟೈಪ್ ಮಾಡಿ ಹುಡುಕುವುದು ಈ ಕಾರಣಕ್ಕಾಗಿಯೇ.

ಅಂತರ್ಜಾಲಕ್ಕೂ ವರ್ಲ್‌ ವೈಡ್‌ ವೆಬ್‌ಗೂ ವ್ಯತ್ಯಾಸವಿದೆ. ವಿಶ್ವದಾದ್ಯಂತ ಇರುವ ವಿವಿಧ ಕಂಪ್ಯೂಟರ್‌ಗಳನ್ನು ಕೂಡಿಸುವ ವ್ಯವಸ್ಥೆಯೇ ಇಂಟರ್‌ನೆಟ್‌. ಅಂತರ್ಜಾಲದ ನೆರವಿನಿಂದ ಮಾಹಿತಿ ಪಡೆಯುವ ವೆಬ್‌ ಪುಟಗಳ ಸಮೂಹವೇ ವರ್ಲ್ಡ್ ವೈಡ್ ವೆಬ್‌. ಅಂದರೆ, ವಿಶ್ವದಾದ್ಯಂತ ವಿವಿಧ ಸಂಸ್ಥೆಗಳು ಆರಂಭಿಸಿದ ಜಾಲತಾಣಗಳ ಪುಟಗಳು ಇದರ ಮೂಲಕ ಸಿಗುತ್ತವೆ.

ಕೆಲವು ಸ್ವಾರಸ್ಯಗಳು

ಅಂತರ್ಜಾಲ ಬಳಕೆಗೆ ಬಂದ 20 ವರ್ಷಗಳ ನಂತರ, ಅಂದರೆ 1989ರಲ್ಲಿ ವರ್ಲ್ಡ್‌ ವೈಡ್‌ ವೆಬ್‌ (WWW) ಬಳಕೆಗೆ ಬಂತು. ಇದನ್ನು ಟಿಮ್‌ ಬರ್ನ್‌ರ್ಸ್‌ ಲೀ ಎಂಬ ಸಂಶೋಧಕ ಬಳಕೆಗೆ ತಂದರು. ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕುವಾಗ ‘WWW' ಎಂದು ಟೈಪ್ ಮಾಡಿ ಹುಡುಕುವುದು ಈ ಕಾರಣಕ್ಕಾಗಿಯೇ.

ಅಂತರ್ಜಾಲಕ್ಕೂ ವರ್ಲ್‌ ವೈಡ್‌ ವೆಬ್‌ಗೂ ವ್ಯತ್ಯಾಸವಿದೆ. ವಿಶ್ವದಾದ್ಯಂತ ಇರುವ ವಿವಿಧ ಕಂಪ್ಯೂಟರ್‌ಗಳನ್ನು ಕೂಡಿಸುವ ವ್ಯವಸ್ಥೆಯೇ ಇಂಟರ್‌ನೆಟ್‌. ಅಂತರ್ಜಾಲದ ನೆರವಿನಿಂದ ಮಾಹಿತಿ ಪಡೆಯುವ ವೆಬ್‌ ಪುಟಗಳ ಸಮೂಹವೇ ವರ್ಲ್ಡ್ ವೈಡ್ ವೆಬ್‌. ಅಂದರೆ, ವಿಶ್ವದಾದ್ಯಂತ ವಿವಿಧ ಸಂಸ್ಥೆಗಳು ಆರಂಭಿಸಿದ ಜಾಲತಾಣಗಳ ಪುಟಗಳು ಇದರ ಮೂಲಕ ಸಿಗುತ್ತವೆ.

ಇವೇ ಮೊದಲು

ರೇ ಟಾಮಿಲಿನ್ಸನ್ ಎಂಬುವವರು ಮೊದಲ ಬಾರಿಗೆ 1971ರಲ್ಲಿ ತಮಗೆ ತಾವೇ ಮೊದಲ ಬಾರಿ ಇ–ಮೇಲ್ ರವಾನಿಸಿದರು. ಈ ಸಂದೇಶ, ಯಂತ್ರದ ಬದಲಿಗೆ ವ್ಯಕ್ತಿಯೊಬ್ಬರಿಗೆ ಕಳುಹಿಸಲಾಗುತ್ತಿದೆ ಎಂದು ಸೂಚಿಸುವುದಕ್ಕೆ @ಗುರುತು ಬಳಸಿದರು.

ಮೊದಲ ವೆಬ್‌ಕ್ಯಾಮ್ ಅನ್ನು ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಕಾಫಿ ತಯಾರಿಸುವ ಯಂತ್ರದ ಕಾರ್ಯವೈಖರಿ ಪರಿಶೀಲಿಸುವುದಕ್ಕೆ ಬಳಸಲಾಯಿತು.

ವಿಶ್ವದ ಮೊದಲ ವೆಬ್‌ಸೈಟ್ info.cern.ch ಇದು ಇಂದಿಗೂ ಬಳಕೆಯಲ್ಲಿದೆ.

ಅಂತರ್ಜಾಲ ಬಳಕೆಯನ್ನು ಮೂಲಭೂತ ಹಕ್ಕುಗಳಲ್ಲಿ ಒಂದಾಗಿ ಪರಿಗಣಿಸಿದ ಮೊದಲ ದೇಶ ಫಿನ್ಲೆಂಡ್‌.

ವರ್ಲ್ಡ್ ವೈಡ್ ವೆಬ್ ಸಂಶೋಧಕ ಟಿಮ್‌ ಬರ್ನ್‌ರ್ಸ್ ಲೀ ಅವರು ಮೊದಲ ಬಾರಿಗೆ ನಾಲ್ವರು ವನಿತೆಯರು ಇದ್ದ ಲೆಸ್‌ ಹಾರಿಬಲ್ಸ್ ಸರ್ನೆಟ್ಸ್‌ ಎಂಬ ಛಾಯಾಚಿತ್ರವನ್ನು ಮೊದಲ ಬಾರಿಗೆ ಅಂತರ್ಜಾಲಕ್ಕೆ ಅಪ್‌ಲೋಡ್ ಮಾಡಿದರು.

ಈಗ ಎಲ್ಲದಕ್ಕೂ ಗೂಗಲ್‌ ಸರ್ಚ್‌ ಎಂಜಿನ್ ಅನ್ನೇ ಬಳಸುತ್ತಿದ್ದೇವೆ. ಆದರೆ ವಿಶ್ವದ ಮೊದಲ ಸರ್ಚ್ ಎಂಜಿನ್‌ WebCrawler.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.