ADVERTISEMENT

ಇಂದಿನಿಂದ 5ಜಿ ತರಂಗಾಂತರ ಹರಾಜು

ಪಿಟಿಐ
Published 26 ಜುಲೈ 2022, 3:12 IST
Last Updated 26 ಜುಲೈ 2022, 3:12 IST
   

ಮುಂಬೈ: ಅತ್ಯಂತ ವೇಗದ ಇಂಟರ್ನೆಟ್ ಸೇವೆ ಒದಗಿಸುವ 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆ ಇಂದು ಆರಂಭವಾಗಲಿದ್ದು, ರಿಲಯನ್ಸ್ ಜಿಯೊ ಮತ್ತು ಭಾರ್ತಿ ಏರ್‌ಟೆಲ್ ಸೇರಿದಂತೆ ನಾಲ್ಕು ಕಂಪನಿಗಳು ₹ 4.3 ಲಕ್ಷ ಕೋಟಿ ಮೌಲ್ಯದ 72 ಗಿಗಾ ಹರ್ಟ್ಸ್ ರೇಡಿಯೊ ಅಲೆಗಳಿಗೆ ಬಿಡ್ ಮಾಡಲು ಸಿದ್ಧವಾಗಿವೆ.

ಹರಾಜು ಪ್ರಕ್ರಿಯೆ ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ಹರಾಜಿನ ದಿನಗಳ ಸಂಖ್ಯೆಯು ರೇಡಿಯೊ ಅಲೆಗಳ ಬೇಡಿಕೆ ಮತ್ತು ಬಿಡ್‌ದಾರರ ಕಾರ್ಯತಂತ್ರವನ್ನು ಅವಲಂಬಿಸಿರುತ್ತದೆ ಎಂದು ಟೆಲಿಕಾಂ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಇಲಾಖೆಯು 5G ಹರಾಜಿನಿಂದ ₹ 70,000 ಕೋಟಿಯಿಂದ ₹ 1,00,000 ಕೋಟಿಗಳಷ್ಟು ಆದಾಯದ ನಿರೀಕ್ಷೆಯಲ್ಲಿದೆ.

5ಜಿ ಹೊಸ-ಯುಗದ ಅಲ್ಟ್ರಾ-ಹೈ ಸ್ಪೀಡ್ ಇಂಟರ್‌ನೆಟ್ ಅನ್ನು ಸಕ್ರಿಯಗೊಳಿಸುತ್ತದೆ. ಅದು- 4G ಗಿಂತ ಸುಮಾರು 10 ಪಟ್ಟು ವೇಗವಾಗಿರುತ್ತದೆ.

ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಎಂಟರ್‌ಪ್ರೈಸಸ್‌ ಹರಾಜಿನಲ್ಲಿ ಭಾಗವಹಿಸಲು ಸಿದ್ಧವಾಗಿದೆ. ಬಿಡ್ಡಿಂಗ್ ಸುಮಾರು ಎರಡು ದಿನಗಳವರೆಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.