ADVERTISEMENT

ಜೈವಿಕ ಎಂಜಿನಿಯರಿಂಗ್‌ ಭವಿಷ್ಯದ ಶಕ್ತಿ: ಅಮೆರಿಕದ ವಿಜ್ಞಾನಿ ಸೂಸನ್‌ ಹಾಕ್‌ಫೀಲ್ಡ್

ಅಮೆರಿಕದ ವಿಜ್ಞಾನಿ ಸೂಸನ್‌ ಹಾಕ್‌ಫೀಲ್ಡ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 20:56 IST
Last Updated 19 ನವೆಂಬರ್ 2020, 20:56 IST

ಬೆಂಗಳೂರು: ಜೀವವಿಜ್ಞಾನ ಮತ್ತು ಎಂಜಿನಿಯರಿಂಗ್‌ನ ಸಮ್ಮಿಶ್ರಣವಾದ ಜೈವಿಕ ಎಂಜಿನಿಯರಿಂಗ್‌ ಜಗತ್ತಿನ ಭವಿಷ್ಯದ ಶಕ್ತಿಯಾಗಲಿದೆ. ಜೈವಿಕ ಎಂಜಿನಿಯರಿಂಗ್‌ನಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು
ಅಮೆರಿಕದ ಮಸಾಚುಸೆಟ್ಸ್ಟ್‌ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯ ಮಾಜಿ ಅಧ್ಯಕ್ಷೆ ಸೂಸನ್‌ ಹಾಕ್‌ಫೀಲ್ಡ್‌ ಪ್ರತಿಪಾದಿಸಿದರು.

‘ಬೆಂಗಳೂರು ತಂತ್ರಜ್ಞಾನ ಶೃಂಗ’ದಲ್ಲಿ ಗುರುವಾರ ‘ಡಿಜಿಟಲ್‌ ಯುಗದಿಂದ ಜೀವಂತ ಯಂತ್ರಗಳತ್ತ’ ಎಂಬ ವಿಷಯ ಕುರಿತು ಮಾತನಾಡಿದ ಅವರು, ‘ಅಣುಸಂಬಂಧಿ ಜೀವವಿಜ್ಞಾನ (ಮಾಲಿಕ್ಯೂಲರ್‌ ಬಯಾಲಜಿ), ನ್ಯಾನೋ ಮತ್ತು ಮೈಕ್ರೋ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳು ಒಗ್ಗೂಡಿದ ಜೈವಿಕ ಎಂಜಿನಿಯರಿಂಗ್‌ ಭವಿಷ್ಯದಲ್ಲಿ ಆರೋಗ್ಯ, ಆಹಾರ, ಇಂಧನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವಲ್ಲಿ ಸಹಕಾರಿಯಾಗಲಿದೆ’ ಎಂದರು.

ಜನಸಂಖ್ಯೆ, 2050ರ ವೇಳೆಗೆ 970 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆಗ ವೈದ್ಯಕೀಯ ಸೌಲಭ್ಯ, ಆಹಾರ, ಇಂಧನ ಮತ್ತು ನೀರಿನ ಕೊರತೆ ಬಾಧಿಸುವ ಸಾಧ್ಯತೆ ಇದೆ. 2050ರ ವೇಳೆಗೆ ಜಗತ್ತಿನಲ್ಲಿ ಇಂಧನದ ಬೇಡಿಕೆ ದುಪ್ಪಟ್ಟಾಗಲಿದೆ.

ADVERTISEMENT

ಇದೇ ರೀತಿ ಜನಸಂಖ್ಯಾ ಹೆಚ್ಚಳ ಮುಂದುವರಿದರೆ ಹೊಸ ಕೃಷಿ ಜಮೀನಿನ ಅಗತ್ಯವೂ ಎದುರಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.