ADVERTISEMENT

ರೆಕ್ಕೆ ರಹಿತ ವಿಂಡ್‌ ಟರ್ಬೈನ್: ಕಂಪನದಿಂದ ತಯಾರಾಗುತ್ತದೆ ವಿದ್ಯುತ್!

ಆರ್.ಬಿ.ಗುರುಬಸವರಾಜ
Published 4 ನವೆಂಬರ್ 2025, 23:46 IST
Last Updated 4 ನವೆಂಬರ್ 2025, 23:46 IST
<div class="paragraphs"><p>ಸಾಂದರ್ಭಿಕ-ಚಿತ್ರ</p></div>

ಸಾಂದರ್ಭಿಕ-ಚಿತ್ರ

   

– ಎ.ಐ ಚಿತ್ರ

ಫ್ರಾನ್ಸ್‌ನ ನಾರ್ಮಂಡಿಯಲ್ಲಿ ರೆಕ್ಕೆರಹಿತ ವಿಂಡ್ ಟರ್ಬೈನ್‍ಗಳು ತಲೆ ಎತ್ತುತ್ತಿವೆ. ಇದುವರೆಗೂ ರೆಕ್ಕೆಗಳಿರುವ ವಿಂಡ್ ಟರ್ಬೈನ್ ಪರಿಚಯವಿದ್ದ ನಮಗೆ ರೆಕ್ಕೆಗಳಿಲ್ಲದ ವಿಂಡ್ ಟರ್ಬೈನ್ ಹೊಸದು ಎನಿಸುತ್ತದೆ. ಇಲ್ಲಿ ಬಳಕೆಯಾದ ತಂತ್ರಜ್ಞಾನ ಹೊಸದು, ಆದರೆ ಅದರಲ್ಲಿನ ವಿಜ್ಞಾನದ ತತ್ವ ಹಳೆಯದು. 

ADVERTISEMENT

ಪ್ರಸ್ತುತ ನಾವು ಎಲ್ಲೆಡೆ ಕಾಣುವ ರೆಕ್ಕೆಸಹಿತ ಗಾಳಿಯಂತ್ರಗಳಲ್ಲಿ ಗಾಳಿಯ ಚಲನಶಕ್ತಿಯನ್ನು ಸೆರೆಹಿಡಿಯಲು ವಿಮಾನದ ರೆಕ್ಕೆಗಳಂತೆ ದೊಡ್ಡ ರೋಟರ್ ರೆಕ್ಕೆ(ಬ್ಲೇಡ್)ಗಳನ್ನು ಬಳಸಲಾಗುತ್ತದೆ. ಗಾಳಿ ಬೀಸಿದಂತೆ ರೆಕ್ಕೆಗಳು ತಿರುಗುತ್ತವೆ. ಗಾಳಿಯ ಚಲನಶಕ್ತಿಯನ್ನು ಯಾಂತ್ರಿಕ (ತಿರುಗುವಿಕೆ) ಶಕ್ತಿಯನ್ನಾಗಿ ಪರಿವರ್ತಿಸಲಾಗುತ್ತದೆ. ಈ ಯಾಂತ್ರಿಕಶಕ್ತಿಯು ಜನರೇಟರ್‌ಗೆ ಸಂಪರ್ಕಗೊಂಡಿರುವ ಶಾಫ್ಟ್ ಅನ್ನು ತಿರುಗಿಸುತ್ತದೆ. ಜನರೇಟರ್ ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಈ ಶಕ್ತಿ ಪರಿವರ್ತನೆಯು ಫ್ಯಾನ್‍ನ ಮೇಲ್ಭಾಗದಲ್ಲಿರುವ ನೇಸೆಲ್‍ನಲ್ಲಿ ಸಂಭವಿಸುತ್ತದೆ. ನಂತರ ಅಲ್ಲಿ ಉತ್ಪತ್ತಿಯಾದ ವಿದ್ಯುತ್‍ನ್ನು ಗ್ರಿಡ್‍ಗೆ ರವಾನಿಸಲಾಗುತ್ತದೆ.

ತಿರುಗುವ ರೆಕ್ಕೆಗಳಿಲ್ಲದ ಪವನವಿದ್ಯುತ್ ಕಂಬಗಳೇ ‘ರೆಕ್ಕೆರಹಿತ ಗಾಳಿಯಂತ್ರ’ಗಳಾಗಿವೆ. ಇವು ತಿರುಗುವ ರೆಕ್ಕೆಗಳಿರುವ ಪವನವಿದ್ಯುತ್ ಕಂಬಗಳಲ್ಲ; ಬದಲಿಗೆ ಎತ್ತರದ, ತೆಳ್ಳಗಿನ, ಸಿಲಿಂಡರಾಕಾರದ ಕಂಬಗಳಾಗಿದ್ದು, ತಂಗಾಳಿಯಲ್ಲಿ ದೀಪಸ್ತಂಭದಂತೆ ಗೋಚರಿಸುತ್ತವೆ. ಗಾಳಿ ಬೀಸಿದಾಗ ಈ ಕಂಬವು ಕಂಪಿಸುತ್ತದೆ. ಈ ಕಂಪನವು ಆಂತರಿಕ ಸುಳಿಗಳನ್ನು ರಚಿಸುತ್ತದೆ ಮತ್ತು ಹೊರಹಾಕುತ್ತದೆ. ಹೀಗೆ ಇಡೀ ಕಂಬವು ಕಂಪಿಸುವ ಮೂಲಕ ಆಂದೋಲನಗೊಳ್ಳುತ್ತದೆ. ಈ ಆಂದೋಲಕ ಚಲನೆಯನ್ನು ಕಂಬದ ತಳದಲ್ಲಿರುವ ಆಲ್ಟರ್ನೇಟರ್ ಮೂಲಕ ಯಾಂತ್ರಿಕ ಶಕ್ತಿಯನ್ನಾಗಿ ಬದಲಿಸಲಾಗುತ್ತದೆ. ನಂತರ ಯಾಂತ್ರಿಕ ಶಕ್ತಿಯು ವಿದ್ಯುತ್ ಆಗಿ ಪರಿವರ್ತಿತವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.