ADVERTISEMENT

ಫೋನ್‌ನಲ್ಲಿ ವಿಡಿಯೊ ಎಡಿಟ್ ಮಾಡಿ

ರಶ್ಮಿ ಕಾಸರಗೋಡು
Published 7 ಆಗಸ್ಟ್ 2019, 7:41 IST
Last Updated 7 ಆಗಸ್ಟ್ 2019, 7:41 IST

ಫೋನ್‌ನಲ್ಲಿ ವಿಡಿಯೊ ಎಡಿಟ್ ಮಾಡಿ

ಅಂಡ್ರಾಯ್ಡ್ ಫೋನ್‌ನಲ್ಲಿ ರೆಕಾರ್ಡ್ ಮಾಡಿರುವ ವಿಡಿಯೊಗಳು ಅಥವಾ ಇನ್ಯಾವುದೇ ವಿಡಿಯೊಗಳನ್ನು ಸುಲಭವಾಗಿ ಎಡಿಟ್ ಮಾಡಲು ಇರುವ ಆ್ಯಪ್‌ಗಳ ಪರಿಚಯ ಇಲ್ಲಿದೆ.

Google Photos App

ADVERTISEMENT

ಗೂಗಲ್ ಪ್ಲೇ ಸ್ಟೋರ್‌ನಿಂದ Google Photos App ಡೌನ್‌ಲೋಡ್ ಮಾಡಿ.
ಆ್ಯಪ್ ಓಪನ್ ಮಾಡಿ. ನಿಮ್ಮ ಗ್ಯಾಲರಿಯಿಂದ ಎಡಿಟ್ ಮಾಡಬೇಕಾದ ವಿಡಿಯೊ ಆಯ್ಕೆ ಮಾಡಿ.

ವಿಡಿಯೊವನ್ನು ಕತ್ತರಿಸಲು ಸ್ಲೈಡರ್ ಬಳಸಿ, ನಿಮಗೆ ಅಗತ್ಯವಿರುವ ಎಡಿಟಿಂಗ್ ಮಾಡಿ ಸೇವ್ ಮಾಡಿ.

Viva video app
ಆ್ಯಪ್ ಡೌನ್‌ಲೋಡ್ ಮಾಡಿ, ಗ್ಯಾಲರಿಯಿಂದ ಎಡಿಟ್ ಮಾಡಬೇಕಾದ ವಿಡಿಯೊ ಆಯ್ಕೆ ಮಾಡಿ.

Next ಕ್ಲಿಕ್ ಮಾಡಿ

Trim Video ಸ್ಕ್ರೀನ್ ಕ್ಲಿಕ್ ಮಾಡಿ ಅಡ್ಡವಾಗಿ ಸ್ಲೈಡರ್‌ನ್ನು ಎಳೆಯಿರಿ.
ವಿಡಿಯೊದ ಯಾವ ಭಾಗವನ್ನು ನೀವು ಉಳಿಸಲು ಬಯಸುತ್ತಿರೋ ಅದನ್ನು ಈ ರೀತಿ ಆಯ್ಕೆ ಮಾಡಿ, Add ಕ್ಲಿಕ್ ಮಾಡಿ. ಒಂದಕ್ಕಿಂತ ಹೆಚ್ಚು ವಿಡಿಯೊ ಕ್ಲಿಪ್‌ಗಳಿದ್ದರೆ ಕತ್ತರಿ ಐಕಾನ್ ಕ್ಲಿಕ್ ಮಾಡಿ ಕತ್ತರಿಸಿ ಎಡಿಟ್ ಮಾಡಬಹುದು.

ಎಡಿಟ್ ಮಾಡಿದ ನಂತರ Next ಬಟನ್ ಕ್ಲಿಕ್ ಮಾಡಿ ಎಡಿಟಿಂಗ್ ಸ್ಕೀನ್‌ಗೆ ಬಂದು ಅಲ್ಲಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಅಥವಾ ಫಿಲ್ಟರ್ಸ್ ಬಳಸಿ ವಿಡಿಯೊ ಎಡಿಟ್ ಮಾಡಬಹುದು.

Save ಮಾಡಬೇಕಾದರೆ Save ಬಟನ್ ಕ್ಲಿಕ್ ಮಾಡಿ, ಅಪ್‌ಲೋಡ್ ಮಾಡಲು upload ಬಟನ್ ಕ್ಲಿಕ್ ಮಾಡಿ.

Export ಮಾಡಲು ಬಯಸುವುದಾದರೆNormal 480P ಆಯ್ಕೆ ಮಾಡಿ Export ಕ್ಲಿಕ್ ಮಾಡಿ.
ಇಲ್ಲಿ ವಿವರಿಸಿರುವ ಆ್ಯಪ್‌ಗಳಲ್ಲದೆ InShot App, KineMaster App ಬಳಸಿ ಕೂಡಾ ವಿಡಿಯೊ ಎಡಿಟ್ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.