ADVERTISEMENT

ಚಾಲಕರಹಿತ ಕಾರು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 19:45 IST
Last Updated 4 ಏಪ್ರಿಲ್ 2020, 19:45 IST
   

ಚಾಲಕ ರಹಿತ ಕಾರು ಎಂಬುದು ಈಗ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ವಿಶ್ವದ ಪ್ರಮುಖ ಕಾರು ತಯಾರಿಕಾ ಕಂಪನಿಗಳಾದ ಬಿಎಂಡಬ್ಲ್ಯೂ, ಮರ್ಸಿಡೀಸ್ ಬೆಂಜ್, ಟೆಸ್ಲಾ ಮೋಟರ್ಸ್‌, ಟೊಯೊಟಾ, ಔಡಿ ಮುಂತಾದವು ತಮ್ಮದೇ ಆದ ಚಾಲಕ ರಹಿತ ಕಾರಿನ ಮಾದರಿಗಳನ್ನು ಸಿದ್ಧಪಡಿಸಿವೆ. ಈ ಕಂಪನಿಗಳ ಚಾಲಕ ರಹಿತ ಕಾರುಗಳು ಇನ್ನೂ ಪರೀಕ್ಷಾ ಹಂತದಲ್ಲಿ ಇವೆ.

ಈ ಕಾರುಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಇರುತ್ತದೆ. ರೇಡಾರ್, ಜಿ‍ಪಿಎಸ್, ಕ್ಯಾಮೆರಾ, ಲೇಸರ್ ಸ್ಕ್ಯಾನರ್‌ಗಳು ಇರುತ್ತವೆ. ಇವು ತಮ್ಮ ಸುತ್ತಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲವು. ಈ ಸಾಧನಗಳಿಂದ ಬರುವ ಮಾಹಿತಿಯನ್ನು ಪರಿಶೀಲಿಸುವ ಕೆಲಸ ಕಾರಿನ ನಿಯಂತ್ರಣ ವ್ಯವಸ್ಥೆಯದ್ದು. ಅಡೆತಡೆಗಳು ಏನಿವೆ, ರಸ್ತೆ ನಿಯಮಗಳ ಬಗ್ಗೆ ಮಾಹಿತಿ ನೀಡುವ ಫಲಕಗಳು (ನೋ ಪಾರ್ಕಿಂಗ್‌, ಓವರ್‌ಟೇಕ್‌ ನಿಷಿದ್ಧ, ಏಕಮುಖ ರಸ್ತೆ ಸಂಚಾರ ಇತ್ಯಾದಿ) ಏನೇನಿವೆ ಎಂಬೆಲ್ಲ ಮಾಹಿತಿಗಳನ್ನು ನಿಯಂತ್ರಣ ವ್ಯವಸ್ಥೆ ಪರಿಶೀಲಿಸುತ್ತ ಇರುತ್ತದೆ.

ರಸ್ತೆಯಲ್ಲಿ ಟ್ರಾಫಿಕ್‌ ಸಿಗ್ನಲ್‌ ಏನು ಹೇಳುತ್ತಿದೆ, ಎದುರಿನಿಂದ ಯಾವ ವಾಹನ ಬರುತ್ತಿದೆ ಎಂಬ ಮಾಹಿತಿಯನ್ನೂ ಈ ಸಾಧನಗಳು ನಿಯಂತ್ರಣ ವ್ಯವಸ್ಥೆಗೆ ರವಾನೆ ಮಾಡುತ್ತವೆ. ಇವೆಲ್ಲವನ್ನು ಪರಿಶೀಲಿಸಿ ನಿಯಂತ್ರಣ ವ್ಯವಸ್ಥೆಯು ಕಾರು ಹೇಗೆ ಮುಂದಕ್ಕೆ ಸಾಗಬೇಕು ಎಂಬುದನ್ನು ತೀರ್ಮಾನಿಸುತ್ತದೆ. ಕಾರಿಗೆ ಅಳವಡಿಸಲಾದ ಕಂಪ್ಯೂಟರ್ ಕಾರಿನ ಆ್ಯಕ್ಸಿಲರೇಟರ್‌ ಒತ್ತುತ್ತದೆ, ಗರಿಷ್ಠ 120 ಕಿ.ಮೀ ವೇಗದಲ್ಲಿ ಕಾರನ್ನು ಚಲಾಯಿಸುತ್ತದೆ, ಬ್ರೇಕ್‌ ಹಾಕಿ ವೇಗ ತಗ್ಗಿಸುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.