ADVERTISEMENT

ಹೈಕ್‌ನಲ್ಲೂ ಎಮೊಜಿಗಳು.. ಹೈಕ್‌ಮೊಜಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:30 IST
Last Updated 20 ನವೆಂಬರ್ 2019, 19:30 IST
ಹೈಕ್‌ಮೊಜಿ
ಹೈಕ್‌ಮೊಜಿ   

ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮಗಳು ಅಥವಾ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ನೀಡಿರುವ ಎಮೊಜಿಗಳು ಸಾಲದು ಎಂದು ಕೆಲವೊಮ್ಮೆ ಅನ್ನಿಸುತ್ತದೆ ಅಲ್ಲವೆ? ಇದೇ ಕಾರಣಕ್ಕಾಗಿ ಹಲವು ಕಂಪನಿಗಳು ನಮ್ಮ ಮುಖದ ಭಾವನೆಯನ್ನೇ ಎಮೊಜಿಯಾಗಿ ಪರಿವರ್ತಿಸುವ ಅವಕಾಶ ಕಲ್ಪಿಸಲು ಆರಂಭಿಸಿವೆ.

ಜನಪ್ರಿಯ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ ಹೈಕ್‌, ತನ್ನ ಬಳಕೆದಾರರಿಗೆ ‘ಹೈಕ್‌ಮೊಜಿ’ ಬಿಡುಗಡೆ ಮಾಡಿದೆ. ನಮ್ಮ ಚಿತ್ರ, ವಿಚಿತ್ರವಾದ ಮುಖಭಾವವನ್ನು ಎಮೊಜಿಯಾಗಿ ಪರಿವರ್ತಿಸಿ ಅದನ್ನು ಹಂಚಿಕೊಳ್ಳಬಹುದು. ಈ ರೀತಿ ಸೃಷ್ಟಿಸಿದ ಎಮೊಜಿಗಳಲ್ಲಿ ವಿಶೇಷವಾದ 100 ಎಮೊಜಿಗಳನ್ನು ಸ್ಟಿಕ್ಕರ್‌ ರೂಪದಲ್ಲಿಸಿಗಲಿವೆ. ಇವುಗಳನ್ನು ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಬೇಕಿದ್ದರೂ ಹಂಚಿಕೊಳ್ಳಬಹುದಾಗಿದೆ.

ಆನ್‌ಲೈನ್‌ನಲ್ಲಿ ಪರಸ್ಪರ ಸಂವಾದ ನಡೆಸುವಾಗ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ವಿವಿಧ ಬಗೆಯ ತನ್ನದೇ ಆದ ಹೈಕ್‌ಮೊಜಿ ಮತ್ತು ಸ್ಟಿಕ್ಕರ್‌ಗಳನ್ನು ನೀಡಿದೆ. ಒಂದು ಸಾವಿರಕ್ಕೂ ಅಧಿಕ ಬಗೆಯ ಹೇರ್‌ಸ್ಟೈಲ್ಸ್‌, ಫೇಷಿಯಲ್‌ ಫೀಚರ್ಸ್‌, ಸ್ಥಳೀಯ ಧಿರಿಸುಗಳು, ನೋಸ್‌ ಪಿನ್ಸ್‌ ಮತ್ತು ತಮ್ಮದೇ ಆದ ಮೊಜಿ ವಿನ್ಯಾಸಗೊಳಿಸುವ ಆಯ್ಕೆಯೂ ನೀಡಿದೆ. ಸದ್ಯಕ್ಕೆ ಹೈಕ್‌ನ ಬೇಟಾ ಆವೃತ್ತಿಯಲ್ಲಿ ಇದು ಲಭ್ಯವಿದೆ. ಕ್ರಮೇಣ ಎಲ್ಲದಕ್ಕೂ ಅಪ್‌ಗ್ರೇಡ್‌ ಮಾಡುವುದಾಗಿ ತಿಳಿಸಿದೆ.

ADVERTISEMENT

ಬಳಕೆದಾರರು ಹೈಕ್‌ ಸ್ಟಿಕ್ಕರ್‌ ಚಾಟ್‌ ಆ್ಯಪ್ ಪಡೆದ ಬಳಿಕ ಸೆಲ್ಫಿ ತೆಗೆದರೆ ಅದು ‘ಹೈಕ್‌ಮೊಜಿ’ಯಾಗಿ ಪರಿವರ್ತನೆ ಆಗಲಿದ್ದು, ಅದಕ್ಕೆ ನಮ್ಮ ಭಾಷೆಯಲ್ಲಿಯೇ ಟ್ಯಾಗ್‌ಲೈನ್‌ ಅಥವಾ ಹೆಸರು ಕೊಡಬಹುದು.

ಭಾರತೀಯ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ತಯಾರಿಸಲಾಗಿದೆ. ಇಂಗ್ಲಿಂಷ್‌, ಹಿಂದಿ ಅಲ್ಲದೆ ಕನ್ನಡ, ಗುಜರಾತಿ, ತಮಿಳು, ಬೆಂಗಾಳಿ, ಮರಾಠಿ, ಮಲಯಾಳಂ, ತೆಲುಗು ಭಾಷೆಗಳಲ್ಲಿ ಬಳಸಬಹುದಾಗಿದೆ. ಗೂಗಲ್‌ ಮತ್ತು ಆ್ಯಪಲ್‌ ಪ್ಲೇ ಸ್ಟೋರ್‌ಗಳಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಹೈಕ್‌ಮೊಜಿ ಸೃಷ್ಟಿ ಹೇಗೆ?

Hike Sticker chat appಗೆ ಹೋಗಿ ಸೆಲ್ಫಿ ತೆಗೆಯಿರಿ. ಅದು ಆಟೊಮೆಟಿಕ್‌ ಆಗಿ ಹೈಕ್‌ಮೊಜಿ ಆಗಿ ಪರಿವರ್ತನೆ ಆಗಲಿದೆ. ಆ ನಂತರ ಅದನ್ನು ಅಂದಗೊಳಿಸುವುದು, ಹೆಸರು ನೀಡುವುದು ಸೇರಿದಂತೆ ನಮಗೆ ಬೇಕಾದ ರೀತಿಯಲ್ಲಿ ಕೆಲವು ಬದಲಾವಣೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.