ADVERTISEMENT

ಜಿಮೇಲ್ ಸೇರಿದಂತೆ ಹಲವು ಗೂಗಲ್ ಸೇವೆ ಕೆಲಕಾಲ ಸ್ಥಗಿತ

ಐಎಎನ್ಎಸ್
Published 27 ಫೆಬ್ರುವರಿ 2023, 13:52 IST
Last Updated 27 ಫೆಬ್ರುವರಿ 2023, 13:52 IST
   

ನವದೆಹಲಿ: ಜಿಮೇಲ್ ಮತ್ತು ವರ್ಕ್‌ಸ್ಪೇಸ್‌ನಂತಹ ಕೆಲವು ಗೂಗಲ್ ಸೇವೆಗಳು ಸೋಮವಾರ ಅಲ್ಪಾವಧಿ ಸ್ಥಗಿತ ಕಂಡಿದ್ದು ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವೆಡೆ ಬಳಕೆದಾರಿಗೆ ಈ ಸೇವೆಗಳ ಪ್ರವೇಶ ಸಾಧ್ಯವಾಗಲಿಲ್ಲ.

ಆನ್‌ಲೈನ್‌ ಸೇವೆ ಸ್ಥಗಿತ ಪತ್ತೆ ತಾಣವಾದ downdetector.comನಲ್ಲಿ ಸುಮಾರು ಶೇ 60 ಮಂದಿ ಗೂಗಲ್‌ ವೆಬ್‌ಸೈಟ್‌ನಲ್ಲಿ ಸಮಸ್ಯೆ ಎದುರಿಸಿರುವುದಾಗಿ ವರದಿ ಮಾಡಿದ್ದಾರೆ. ಶೇ 35 ರಷ್ಟು ಜನ ಲಾಗಿನ್‌ನಲ್ಲಿ ಸಮಸ್ಯೆ ಅನುಭವಿಸಿರುವುದಾಗಿ ಹೇಳಿದ್ದಾರೆ.

ಕೆಲವು ಬಳಕೆದಾರರು ತಾತ್ಕಾಲಿಕ ದೋಷ ಸಮಸ್ಯೆ ಎದುರಿಸಿದ್ದಾರೆ. ಹಲವಾರು ಬಳಕೆದಾರರು ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಎಲ್ಲ ಕಡೆಯೂ ಗೂಗಲ್‌ ಸರ್ವರ್‌ ಡೌನ್‌ ಇದೆಯಾ? ಜಿಮೇಲ್‌ ಸೇರಿದಂತೆ ಯಾವುದೇ ಎಐ ಸಾಧನ ಬಳಸಲು ಸಾಧ್ಯವಾಗುತ್ತಿಲ್ಲ ಎಂದು’ ಬಳಕೆದಾರರೊಬ್ಬರು ಟ್ವೀಟ್‌ ಮಾಡಿದ್ದಾರೆ.

ಸ್ಥಗಿತಕ್ಕೆ ನಿಖರ ಕಾರಣದ ಕುರಿತು ಕಂಪನಿ ಈವರೆಗೆ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.