ADVERTISEMENT

ರಿಮೂವ್ ಚೀನಾ ಆ್ಯಪ್ಸ್‌ನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದ ಗೂಗಲ್

ಏಜೆನ್ಸೀಸ್
Published 3 ಜೂನ್ 2020, 9:04 IST
Last Updated 3 ಜೂನ್ 2020, 9:04 IST
ರಿಮೂವ್ ಚೀನಾ ಆ್ಯಪ್ಸ್
ರಿಮೂವ್ ಚೀನಾ ಆ್ಯಪ್ಸ್   

ಮುಂಬೈ: ಟಿಕ್‌ಟಾಕ್‌ಗೆ ಭಾರತೀಯರ ಉತ್ತರ ಎಂದು ಬಿಂಬಿಸಿದ್ದ ಮಿತ್ರೊನ್ (Mitron) ಆ್ಯಪ್‌ನ್ನು ಮಂಗಳವಾರ ಗೂಗಲ್ ಪ್ಲೇ ಸ್ಟೋರ್‌ನಿಂದ ಕಿತ್ತು ಹಾಕಿದ ನಂತರ ಇದೀಗರಿಮೂವ್ ಚೀನಾ ಆ್ಯಪ್ಸ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.
ಈ ಆ್ಯಪ್‌ನ್ನು ತೆಗೆದು ಹಾಕಿದ್ದು ಯಾಕೆ? ಮತ್ತೆ ಈ ಆ್ಯಪ್ ಲಭ್ಯವಾಗಲಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸದ್ಯ ಲಭ್ಯವಾಗಿಲ್ಲ.

ಜೈಪುರ ಮೂಲದ ಒನ್ ಟಚ್ ಆ್ಯಪ್ ಲ್ಯಾಬ್ಸ್ಅಭಿವೃದ್ಧಿಪಡಿಸಿದ ಆ್ಯಪ್‌ ಆಗಿದೆ ರಿಮೂವ್ ಚೀನಾ ಆ್ಯಪ್ಸ್.ಈ ಆ್ಯಪ್‌ನ್ನು ಪ್ಲೇ ಸ್ಟೋರ್‌ನಿಂದ ರದ್ದುಮಾಡಲಾಗಿದೆ ಎಂದು ಇದೇ ಕಂಪನಿ ಟ್ವೀಟ್ ಮಾಡಿದೆ.

ಪ್ಲೇ ಸ್ಟೋರ್ ನಿಯಮಗಳನ್ನು ಉಲ್ಲಂಘಿಸಿದರೆ ಮಾತ್ರ ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್ ತೆಗೆದುಹಾಕುತ್ತದೆ. ಮಿತ್ರೊನ್ ಆ್ಯಪ್‌ಗೆ ಆಗಿದ್ದೂ ಅಷ್ಟೇ.

ADVERTISEMENT

ಸಿಎನ್‌ಬಿಸಿ ಟಿವಿ 18 ವರದಿಯ ಪ್ರಕಾರ ಗೂಗಲ್ ಕಂಪನಿಯು ಈ ಅಪ್ಲಿಕೇಶನ್ ಅನ್ನು ರೆಡ್ ಫ್ಲ್ಯಾಗ್ ಮಾಡಿದೆ ಮತ್ತು ಅದರ ಸ್ಪ್ಯಾಮ್ ಮತ್ತು ಕನಿಷ್ಠ ಕ್ರಿಯಾತ್ಮಕತೆ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅದನ್ನು ರದ್ದುಗೊಳಿಸಲುನಿರ್ಧರಿಸಿದೆ. 'ಪುನರಾವರ್ತಿತ ವಿಷಯ’ ಇದೆ ಎಂದು ನೀತಿಯ ಮತ್ತೊಂದು ಷರತ್ತು ಉಲ್ಲೇಖಿಸಿದೆ. ಇದರರ್ಥ ಯಾವುದೇ ಮೂಲ ವಿಷಯ ಅಥವಾ ಮೌಲ್ಯವನ್ನು ಸೇರಿಸದೆ ಇತರ ಅಪ್ಲಿಕೇಶನ್‌ಗಳಿಂದ ವಿಷಯವನ್ನು ನಕಲಿಸುವುದು ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ಹೇಳಿದೆ.

ರಿಮೂವ್ ಚೀನಾ ಆ್ಯಪ್ಸ್‌ನ್ನು ನೀವು ಈಗಾಗಲೇ ಡೌನ್‌ಲೋಡ್ ಮಾಡಿದ್ದರೆ ಅದು ಕಾರ್ಯವೆಸಗುತ್ತದೆ. ಆ್ಯಪ್‌ನ ಹೆಸರೇ ಸೂಚಿಸುವಂತೆ ಇದು ನಿಮ್ಮ ಫೋನ್‌ನಲ್ಲಿರುವ ಚೀನಾದಲ್ಲಿ ಅಭಿವೃದ್ಧಿಪಡಿಸಿರುವ ಎಲ್ಲ ಆ್ಯಪ್‌ಗಳನ್ನು ಡಿಲೀಟ್ ಮಾಡುತ್ತದೆ. ನಿಮ್ಮ ಕೈಯಲ್ಲಿರುವ ಮೊಬೈಲ್‌ನ್ನು ಪೂರ್ತಿ ಸ್ಕ್ಯಾನ್ ಮಾಡಿ ಅಲ್ಲಿರುವ ಚೀನಾ ಮೂಲದ ಆ್ಯಪ್‌ಗಳನ್ನು ಪಟ್ಟಿ ಮಾಡುತ್ತದೆ. ಯಾವ ಆ್ಯಪ್‌ನ್ನು ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ಅನ್ ಇನ್‌ಸ್ಟಾಲ್ ಮಾಡಬೇಕು ಎಂಬುದು ವೈಯಕ್ತಿಕ ಆಯ್ಕೆಯಾಗಿದೆ.

ತಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಚೀನಾದ ಅಪ್ಲಿಕೇಶನ್‌ಗಳನ್ನು ಅಳಿಸುವ ಉದ್ದೇಶದಿಂದ ಭಾರತದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಫೋನ್‌ನಲ್ಲಿ ಇದನ್ನು ಇನ್‌ಸ್ಟಾಲ್ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ತನಕ ಇದು ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಸಿಗುವ ಆ್ಯಪ್‌ಗಳ ಪಟ್ಟಿಯಲ್ಲಿಅಗ್ರಸ್ಥಾನದಲ್ಲಿತ್ತು.

ಚೀನಾದಲ್ಲಿ ಅಭಿವೃದ್ಧಿಪಡಿಸಿದ ಆ್ಯಪ್‌ಗಳ ರೆಪೊಸಿಟರಿ ಡೇಟಾಬೇಸ್‌ನೊಂದಿಗೆ ಹೋಲಿಸುವ ಮೂಲಕ ಅಪ್ಲಿಕೇಶನ್ ಡೆವಲಪರ್‌ನ ಮೂಲ ದೇಶವನ್ನು ಗುರುತಿಸುವ ಕಾರ್ಯವನ್ನು ಈ ಆ್ಯಪ್ ಮಾಡುತ್ತದೆ ಎಂದು ಕೌಂಟರ್ ಪಾಯಿಂಟ್‌ನ ಸೈಬರ್ ಸೆಕ್ಯುರಿಟಿ ಸಂಶೋಧಕ ಸತ್ಯಜಿತ್ ಸಿನ್ಹಾ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಡಾಟ್ ಕಾಂ ವರದಿ ಮಾಡಿದೆ. ಆ್ಯಪ್ ಬಳಸಲು ಸುರಕ್ಷಿತವಾಗಿದೆ ಮತ್ತು ಅದನ್ನು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿರುವವರು ಚಿಂತೆಗೊಳಗಾಗುವ ಅಗತ್ಯವಿಲ್ಲ. ಇಲ್ಲಿರುವ ಆ್ಯಪ್ ಸ್ಕ್ಯಾನ್, ಇನ್‌ಸ್ಟಾಲ್ ಆಗಿರುವ ಅಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ (ಎಪಿಕೆ) ಮೇಲೆ ಮಾತ್ರ ಗಮನ ಹರಿಸುತ್ತದೆ. ಆದ್ದರಿಂದ, ಸಂಗ್ರಹಿಸಿದ ವೈಯಕ್ತಿಕ ಡೇಟಾದ ಮೇಲೆ ಯಾವುದೇ ಇದು ಪರಿಣಾಮ ಬೀರುವುದಿಲ್ಲ ಎಂದು ಸಿನ್ಹಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.