ADVERTISEMENT

ತಿಂಗಳಿಗೆ 11 ಜಿಬಿ ಡೇಟಾ ಬಳಕೆ

ಡೇಟಾ ಬಳಕೆ ಪ್ರಮಾಣ ಭಾರತದಲ್ಲೇ ಅತ್ಯಧಿಕ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:45 IST
Last Updated 27 ಫೆಬ್ರುವರಿ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ : ಕೈಗೆಟುಕುವ ಬೆಲೆಗೆ ಸಿಗುತ್ತಿರುವ ಮೊಬೈಲ್‌ ಫೋನ್‌, ಕಡಿಮೆ ದರದ ಡೇಟಾ ಪ್ಲಾನ್‌, ವಿಡಿಯೊ ಸೇವೆಗಳ ಜನಪ್ರಿಯತೆ ಮತ್ತು 4ಜಿ ಜಾಲದ ವಿಸ್ತರಣೆ– ಈ ಎಲ್ಲ ಕಾರಣಗಳಿಂದ ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಪ್ರತಿ ಭಾರತೀಯ ತಿಂಗಳಿಗೆ ಸರಾಸರಿ 11 ಜಿಬಿ ಡೇಟಾ ಬಳಸುತ್ತಿದ್ದಾನೆ ಎಂದು ನೋಕಿಯಾ ಸಂಸ್ಥೆ ಗುರುವಾರ ತಿಳಿಸಿದೆ.

2019ರಲ್ಲಿ ಭಾರತದ ಒಟ್ಟಾರೆ ಡೇಟಾ ದಟ್ಟಣೆ ಪ್ರಮಾಣ ಶೇ 47ಕ್ಕೆ ಏರಿಕೆಯಾಗಿದೆ ಎಂದು ‘ಮೊಬೈಲ್ ಬ್ರಾಡ್‌ಬ್ಯಾಂಡ್ ಇಂಡಿಯಾ ಟ್ರಾಫಿಕ್ ಇಂಡೆಕ್ಸ್’ ವಾರ್ಷಿಕ ವರದಿಯಲ್ಲಿ ಸಂಸ್ಥೆ ಮಾಹಿತಿ ನೀಡಿದೆ. ಡೇಟಾ ಬಳಕೆ ಪ್ರಮಾಣದಲ್ಲಿ 4ಜಿ ಅಗ್ರ ಸ್ಥಾನದಲ್ಲಿದ್ದು, 3ಜಿ ಬಳಕೆ ಪ್ರಮಾಣ ಶೇ 30ರಷ್ಟು ಕುಸಿದಿದೆ ಎಂದು ನೋಕಿಯಾ ಇಂಡಿಯಾ ಮುಖ್ಯ ಮಾರುಕಟ್ಟೆ ಅಧಿಕಾರಿ ಅಮಿತ್ ಮಾರ್ವಾ ತಿಳಿಸಿದ್ದಾರೆ.

ಜಾಗತಿಕವಾಗಿ ಗಮನಿಸಿದರೆ,ಡೇಟಾ ಬಳಕೆ ಪ್ರಮಾಣ ಭಾರತದಲ್ಲೇ ಅತ್ಯಧಿಕ. ಚೀನಾ, ಅಮೆರಿಕ, ಫ್ರಾನ್ಸ್, ದಕ್ಷಿಣ ಕೊರಿಯಾ, ಜಪಾನ್, ಜರ್ಮನಿ ಹಾಗೂ ಸ್ಪೇನ್ದೇಶಗಳನ್ನು ಭಾರತ ಈ ವಿಚಾರದಲ್ಲಿ ಹಿಂದಿಕ್ಕಿದೆ. ಒಂದು ಜಿಬಿ ಡೇಟಾದಲ್ಲಿ ಸುಮಾರು 200 ಹಾಡುಗಳು ಹಾಗೂ ಒಂದು ಗಂಟೆಯ ವಿಡಿಯೊವನ್ನು ನೋಡಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.