ADVERTISEMENT

ಸ್ಮಾರ್ಟ್‌ಫೋನ್‌ಗೆ ಕೃತಕ ಚರ್ಮದ ಕವಚ!

ಪಿಟಿಐ
Published 21 ಅಕ್ಟೋಬರ್ 2019, 17:16 IST
Last Updated 21 ಅಕ್ಟೋಬರ್ 2019, 17:16 IST
   

ಲಂಡನ್‌: ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಮುಂತಾದ ಉಪಕರಣಗಳಬಳಕೆದಾರರ
ಹಿಡಿತ, ಹಿಡಿತದ ಒತ್ತಡ, ಚಿವುಟುವಿಕೆ, ಕಚಗುಳಿ, ಬಳಕೆದಾರರು ಇರುವಂಥ ಪ್ರದೇಶ ಮುಂತಾದುವುಗಳನ್ನು ಗ್ರಹಿಸಬಲ್ಲ ಕೃತಕ ಚರ್ಮವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಫ್ರಾನ್ಸ್‌ನ ಸೊರ್ಬನ್‌ ವಿಶ್ವವಿದ್ಯಾಲಯ ಹಾಗೂ ಟೆಲಿಕಾಂ ಪ್ಯಾರಿಸ್‌ಟೆಕ್‌ ಸಹಯೋಗದಲ್ಲಿ ಲಂಡನ್‌ನ ಬ್ರಿಸ್ಟಲ್‌ ವಿಶ್ವವಿದ್ಯಾಲಯದ ಸಂಶೋಧಕರು ಮೊಬೈಲ್‌ ಫೋನ್‌ ಕವಚ, ಕಂಪ್ಯೂಟರ್‌ ಟಚ್‌ಪ್ಯಾಡ್‌ ಹಾಗೂ ಸ್ಮಾರ್ಟ್‌ ವಾಚ್‌ ಒಂದನ್ನುಅಭಿವೃದ್ಧಿಪಡಿಸಿದ್ದು, ಬಣ್ಣ ಮತ್ತು ಗ್ರಹಿಕೆಯಲ್ಲಿ ಮನುಷ್ಯರ ಚರ್ಮವನ್ನೇ ಇದು ಹೋಲುತ್ತದೆ. ಮನುಷ್ಯರ ಚರ್ಮದಲ್ಲಿ ಇರುವಂತೆ ಪದರದ ಮಾದರಿಯಲ್ಲಿ ಹಲವು ಪದರಗಳಸಿಲಿಕಾನ್‌ ಒಳಪೊರೆಯನ್ನು ಕೃತಕ ಚರ್ಮ ಹೊಂದಿದೆ. ಉಪಕರಣಗಳಿಗೆ ಬಲಿಷ್ಠವಾದ ಕವಚವಾಗಿಯೂ ಇದು ಕಾರ್ಯನಿರ್ವಹಿಸಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

‘ಇಮೋಜಿ’ಗಳ ಬಳಕೆ: ಪ್ರಸ್ತುತ ಸಾಕಷ್ಟು ಜನಪ್ರಿಯತೆ ಪಡೆದಿರುವ ಇಮೋಜಿಗಳ ಬಳಕೆಯನ್ನು ಇಲ್ಲಿ ಮಾಡಲಾಗಿದೆ. ಮೊಬೈಲ್‌ ಅನ್ನು ಬಲವಾಗಿ ಹಿಡಿದರೆ, ಸಿಟ್ಟಿನ ಮುಖವುಳ್ಳ ಇಮೋಜಿ ಗೋಚರಿಸಲಿದ್ದು, ಕೃತಕ ಚರ್ಮಕ್ಕೆಕಚಗುಳಿ ಇಟ್ಟರೆ ನಗುವ ಇಮೋಜಿ ಬರಲಿದೆ.

ADVERTISEMENT

‘ರೊಬೊಟಿಕ್‌ ಕ್ಷೇತ್ರದಲ್ಲಿ ಕೃತಕ ಚರ್ಮವನ್ನು ಹೆಚ್ಚಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ದಿನನಿತ್ಯ ಬಳಸುವ ಉಪಕರಣಗಳಿಗೂ ಕೃತಕ ಚರ್ಮದ ಕವಚ ಅಳವಡಿಕೆಗೆ ಸಂಶೋಧನೆ ನಡೆಸಿದ್ದೇವೆ’ ಎಂದು ವಿಶ್ವವಿದ್ಯಾ ಲಯದ ಪ್ರೊ.ಆ್ಯನ್‌ ರೌದೌತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.