ADVERTISEMENT

ವೈಯಕ್ತಿಕ ಮಾಹಿತಿ ಕದಿಯಲು ಸ್ಮಾರ್ಟ್‌ಬಲ್ಬ್‌ ಬಳಕೆ!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 11:54 IST
Last Updated 23 ಅಕ್ಟೋಬರ್ 2019, 11:54 IST
   

ಮನೆಯಲ್ಲಿ ವೈ–ಫೈ ನೆಟ್‌ವರ್ಕ್‌ಗೆ ಜೋಡಣೆಯಾಗಿರುವ ಇನ್ಫ್ರಾರೆಡ್‌ ತಂತ್ರಜ್ಞಾನವುಳ್ಳ ಸ್ಮಾರ್ಟ್‌ಬಲ್ಬ್‌ ಬಳಸಿಕೊಂಡು ಹ್ಯಾಕರ್‌ಗಳು ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು ಎಂದು ಅಮೆರಿಕದಲ್ಲಿರುವ ಭಾರತೀಯ ಸಂಜಾತ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಸ್ಯಾನ್‌ ಆ್ಯಂಟೊನಿಯೊಟೆಕ್ಸಾಸ್‌ ವಿಶ್ವವಿದ್ಯಾಲಯದ(ಯುಟಿಎಸ್‌ಎ) ಸಂಶೋಧಕರು ಪ್ರಮುಖ ಸ್ಮಾರ್ಟ್‌ಲೈಟ್‌ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು‍ಪರಿಶೀಲಿಸಿ, ಅದರಲ್ಲಿರುವ ಸುರಕ್ಷತಾ ಲೋಪಗಳನ್ನು ಪತ್ತೆಹಚ್ಚಿದ್ದಾರೆ.

ಏನಿದು ಸ್ಮಾರ್ಟ್‌ಬಲ್ಬ್‌?:ಮನೆಯ ಕೋಣೆಯೊಳಗೆ ಇರುವಂಥ ಬೆಳಕು, ಜನರ ಮನಃಸ್ಥಿತಿಗೆ ತಕ್ಕಂತೆ ಬಣ್ಣ ಹಾಗೂ ತೀವ್ರತೆಯನ್ನು ಬದಲಾಯಿಸಿಕೊಳ್ಳುವ ತಂತ್ರಜ್ಞಾನ ಸ್ಮಾರ್ಟ್‌ಬಲ್ಬ್‌ಗಳಲ್ಲಿದೆ. ಕೆಲವು ಸ್ಮಾರ್ಟ್‌ಬಲ್ಬ್‌ಗಳನ್ನುಮೊಬೈಲ್‌ ಮೂಲಕ ನಿಯಂತ್ರಿಸಿ, ಅದರಿಂದ ಸೂಸುವಬಣ್ಣಗಳನ್ನು ಬದಲಿಸಬಹುದಾಗಿದೆ.

ADVERTISEMENT

‘ಬಹುತೇಕ ಸ್ಮಾರ್ಟ್‌ಬಲ್ಬ್‌ಗಳಲ್ಲಿ ಇನ್ಫ್ರಾರೆಡ್‌ ವಿಕಿರಣಗಳಿದ್ದು, ಇವುಗಳನ್ನು ವೈಫೈ ನೆಟ್‌ವರ್ಕ್‌ ಮುಖಾಂತರ ಹ್ಯಾಕರ್‌ಗಳು ನಿಯಂತ್ರಿಸಬಹುದು ಎನ್ನುವ ಅರಿವು ಬಳಕೆದಾರರಲ್ಲಿ ಇರುವುದಿಲ್ಲ. ಇವುಗಳ ಸಹಾಯದಿಂದ ಕಂಪ್ಯೂಟರ್‌ಗಳಲ್ಲಿ ಇರುವ ಮಾಹಿತಿಯನ್ನು ಕದಿಯಬಹುದು’ ಎಂದು ಯುಟಿಎಸ್‌ಎ ಪ್ರೊ.ಮುರ್ಟುಜ ಜಡ್ಲಿವಾಲಾ ತಿಳಿಸಿದರು.

ಸ್ಮಾರ್ಟ್‌ಬಲ್ಬ್‌ ಉತ್ಪಾದಕರೂ ಈ ಸುರಕ್ಷತಾ ಲೋಪಗಳನ್ನು ಗುರುತಿಸಿ, ಸ್ಮಾರ್ಟ್‌ಬಲ್ಬ್‌ಗಳು ಮನೆಯಲ್ಲಿರುವ ಇತರೆ ಸ್ಮಾರ್ಟ್‌ಹೋಂ ಉಪಕರಣಗಳು ಹಾಗೂ ಇತರೆ ಎಲೆಕ್ಟ್ರಾನಿಕ್‌ ಉಪಕರಣಗಳ ಜತೆ ಜೋಡಣೆಯಾಗದಂತೆ ಮುಂಜಾಗೃತಾ ಕ್ರಮಗಳನ್ನು ವಹಿಸುವುದು ಮುಖ್ಯ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.