ADVERTISEMENT

ಗೂಗಲ್ ಪ್ಲಸ್ ನಿಲ್ಲುವ ಮುನ್ನ...

ರಶ್ಮಿ ಕಾಸರಗೋಡು
Published 6 ಫೆಬ್ರುವರಿ 2019, 19:30 IST
Last Updated 6 ಫೆಬ್ರುವರಿ 2019, 19:30 IST
   

ಗೂಗಲ್ ಸಂಸ್ಥೆಯ ಸೋಷಿಯಲ್ ನೆಟ್‌ವರ್ಕ್‌ ಗೂಗಲ್ ಪ್ಲಸ್ (Google +) ಸೇವೆ ಏಪ್ರಿಲ್ 2ರಂದು ರದ್ದಾಗಲಿದೆ. ಹಾಗಾಗಿ ಗೂಗಲ್ ಪ್ಲಸ್‌ನಲ್ಲಿ ಇರುವ ಮಾಹಿತಿಗಳನ್ನು ಡೌನ್‍ಲೋಡ್ ಮಾಡಿಟ್ಟುಕೊಳ್ಳಿ.

ಸೇವೆ ನಿಷ್ಕ್ರಿಯಗೊಂಡರೆ ಏನೆಲ್ಲಾ ಡಿಲೀಟ್ ಆಗುತ್ತದೆ?
ನೀವು ಕ್ರಿಯೇಟ್ ಮಾಡಿರುವ ಗೂಗಲ್ ಪ್ಲಸ್ ಪೇಜ್, ಗೂಗಲ್ ಪ್ಲಸ್ ಆಲ್ಬಂನಲ್ಲಿರುವ ಫೋಟೊ, ವಿಡಿಯೊಗಳು ಡಿಲೀಟ್ ಆಗಲಿದೆ. ಅಂದಹಾಗೆ Google Photosನಲ್ಲಿ ಸಂಗ್ರಹವಾಗಿರುವ ಫೋಟೊ ಮತ್ತು ವಿಡಿಯೊಗಳು ಏನೂ ಆಗುವುದಿಲ್ಲ. ಗೂಗಲ್ ಖಾತೆಯೊಂದಿಗೆ ಲಿಂಕ್ ಇರುವ ಯೂಟ್ಯೂಬ್, ಮ್ಯಾಪ್ ಮತ್ತು ಇನ್ನಿತರ ಸೇವೆಗಳು ಸರಾಗವಾಗಿ ಮುಂದುವರಿಯಲಿವೆ. ಗೂಗಲ್ ಪ್ಲಸ್ ಸೇವೆ ಮಾತ್ರ ಸ್ಥಗಿತಗೊಳ್ಳಲಿದೆ.

ಮಾಹಿತಿ ಡೌನ್‍ಲೋಡ್ ಮಾಡುವುದು ಹೇಗೆ?
* ಗೂಗಲ್ ಖಾತೆಗೆ ಲಾಗಿನ್ ಆಗಿ

ADVERTISEMENT

*Takeout ಪೇಜ್‍ಗೆ ಹೋಗಲು ಈ ಲಿಂಕ್ ಕ್ಲಿಕ್ ಮಾಡಿ https://takeout.google.com/settings/takeout/custom/circles,plus_one,plus_communities,stream

* ಗೂಗಲ್ ಪ್ಲಸ್‌ನಲ್ಲಿರುವ ಯಾವ ಮಾಹಿತಿ ಬೇಕೋ ಅದನ್ನು ಆಯ್ಕೆ ಮಾಡಿ.
NEXT ಕ್ಲಿಕ್ ಮಾಡಿ. ಆಮೇಲೆ ಮಾಹಿತಿಗಳನ್ನು ಯಾವ ಫಾರ್ಮೆಟ್‍ನಲ್ಲಿ (.zip ಅಥವಾ .tgz) archive ಮಾಡಬೇಕೆಂದು ಆಯ್ಕೆ ಮಾಡಿ.

*archive ಗಾತ್ರವನ್ನೂ ಆಯ್ಕೆ ಮಾಡಿಕೊಳ್ಳಿ.

* ಈ ಮಾಹಿತಿಗಳು ನಿಮಗೆ ಯಾವ ರೀತಿಯಲ್ಲಿ ಬೇಕು ಎಂಬುದಕ್ಕೆ ನಾಲ್ಕು ಆಯ್ಕೆಗಳಿರುತ್ತವೆ. Sens download link via email, Add to drive, Add to Dropbox, Add to One Drive, Add to Box - ಇದರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿ. create archive ಕ್ಲಿಕ್ ಮಾಡಿ.

*ನಿಮ್ಮ ಮಾಹಿತಿ ನೀವು ಆಯ್ಕೆ ಮಾಡಿದ ಫಾರ್ಮೆಟ್‍ನಲ್ಲಿ ನಿಮ್ಮ ಖಾತೆಯಲ್ಲಿ ಸೇವ್ ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.