ADVERTISEMENT

ಥಾಮ್ಸ್‌ನ್‌ನಿಂದ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ QLED T.V, ಏರ್ ಕೂಲರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 23:30 IST
Last Updated 18 ಏಪ್ರಿಲ್ 2025, 23:30 IST

ಥಾಮ್ಸ್‌ನ್‌
ಥಾಮ್ಸ್‌ನ್‌    

ನವದೆಹಲಿ: ಫ್ರೆಂಚ್ ಗೃಹಪಯೋಗಿ ಎಲೆಕ್ಟ್ರಾನಿಕ್ ಕಂಪನಿಯಾದ ಥಾಮ್ಸನ್, ಕಡಿಮೆ ಬೆಲೆಗೆ ದೊರಕಬಹುದಾದ ಉತ್ತಮ ದರ್ಜೆಯ ಥಾಮ್ಸನ್ ಕ್ಯೂಎಲ್‌ಇಡಿ ಲಿನಕ್ಸ್ ಟಿ.ವಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕ್ಯೂಎಲ್‌ಇಡಿ ಲಿನಕ್ಸ್ ಟಿ.ವಿ ಯೂ 24, 32 ಹಾಗೂ 40 ಇಂಚುಗಳಲ್ಲಿ ಲಭ್ಯವಿದೆ. 24 ಇಂಚಿನ ಟಿವಿ ಶ್ರೇಣಿಯಲ್ಲಿ ಕ್ಯೂಎಲ್‌ಇಡಿ ಟಿವಿ ಜಗತ್ತಿನಲ್ಲಿಯೇ ಪ್ರಥಮ ಎಂದು ಕಂಪನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಥಾಮ್ಸನ್ ಕ್ಯೂಎಲ್‌ಇಡಿ ಲಿನಕ್ಸ್ ಟಿ.ವಿ Linux Coolita 3.0 OS ಹೊಂದಿದೆ. ಈ ಮೂಲಕ ಉತ್ತಮ ಕಾರ್ಯನಿರ್ವಹಣೆ, ಶ್ರೇಷ್ಠ ಗುಣಮಟ್ಟದ ಡಿಸ್‌ಪ್ಲೆ, ಉತ್ತಮ ಸೌಂಡ್ ಹಾಗೂ ಸುಲಭವಾಗಿ ಆಯ್ಕೆಗಳನ್ನು (personalization) ಜೋಡಿಸಬಹುದಾದ ವ್ಯವಸ್ಥೆ ಇದೆ ಎಂದು ತಿಳಿಸಿದೆ. Bezel Less Design ಹೊಂದಿರುವ ಅತಿ ತೆಳುವಾದ ಪರದೆ ಇದೆ ಎಂದು ತಿಳಿಸಿದೆ.

ADVERTISEMENT

ದೊಡ್ಡ ಶ್ರೇಣಿಯ ಟಿ.ವಿಯಲ್ಲಿರಬಹುದಾದ ಹಲವು ಸೌಲಭ್ಯಗಳನ್ನು ಕ್ಯೂಎಲ್‌ಇಡಿ ಟಿ.ವಿಯು ಹೊಂದಿದ್ದು ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ ಎಂದು ತಿಳಿಸಿದೆ.

24AlphaQ001ಮಾದರಿಯ ಬೆಲೆ ₹6,799

32AlphaQ019 ಮಾದರಿಯ ಬೆಲೆ ₹8,999

40AlphaQ060 ಮಾದರಿಯ ಬೆಲೆ ₹12,999

ಇದರ ಜೊತೆಗೆ ಥಾಮ್ಸನ್ ಕಂಪನಿಯು ರಿಮೋಟ್ ಕಂಟ್ರೋಲ್ ತಂತ್ರಜ್ಞಾನದೊಂದಿಗೆ ಸ್ಮಾರ್ಟ್ ಏರ್ ಕೂಲರ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ವಿವಿಧ ಮಾದರಿಗಳಿಗೆ ₹5,699 ರಿಂದ ₹8,999ರಿಂದ ಬೆಲೆ ಇದೆ. Flipkart ನಲ್ಲಿ ಹಾಗೂ ಪ್ರಮುಖ ಸ್ಟೋರ್‌ಗಳಲ್ಲಿ ಟಿ.ವಿ ಹಾಗೂ ಏರ್ ಕೂಲರ್‌ಗಳನ್ನು ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಕಡಿಮೆ ಬೆಲೆಗೆ ದೊರಕಬಹುದಾದ ಅತ್ಯುತ್ತಮ ಹಾಗೂ ಆಧುನಿಕ ತಂತ್ರಜ್ಞಾನದ ಟಿ.ವಿ ಮತ್ತು ಏರ್‌ಕೂಲರ್‌ಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಥಾಮ್ಸನ್ ಮುಂಚೂಣಿಯಲ್ಲಿದೆ ಎಂದು ಥಾಮ್ಸನ್ ಇಂಡಿಯಾದ ಸಿಇಒ (SPPL) ಅವನೀತ್ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.