ADVERTISEMENT

ಇನ್ಫೊಸಿಸ್‌– ಮೈಸೂರು ಕೇಂದ್ರದ ಮುಖ್ಯಸ್ಥರಾಗಿ ವಿನಾಯಕ ಹೆಗಡೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 7:03 IST
Last Updated 16 ಮಾರ್ಚ್ 2023, 7:03 IST
ವಿನಾಯಕ ಪಿ. ಹೆಗಡೆ
ವಿನಾಯಕ ಪಿ. ಹೆಗಡೆ   

ಮೈಸೂರು: ಇನ್ಫೊಸಿಸ್‌– ಮೈಸೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿ ವಿನಾಯಕ ಪಿ. ಹೆಗಡೆ ನೇಮಕವಾಗಿದ್ದಾರೆ.

ಕಂಪನಿಯಲ್ಲಿ ಉಪಾಧ್ಯಕ್ಷ ಹಾಗೂ ಐವಿಎಸ್‌ – ಐಎಚ್‌ಎಲ್‌ಸಿಪಿ ಘಟಕದ ಮುಖ್ಯಸ್ಥರಾಗಿರುವ ಅವರು, ಬುಧವಾರ ಸಾಜಿ ಮಾಥ್ಯೂ ಅವರಿಂದ ಅಧಿಕಾರ ಸ್ವೀಕರಿಸಿದರು.

ಕಂಪನಿಯ ವಿವಿಧ ಹುದ್ದೆಗಳಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಗ್ಗೊಣ ಗ್ರಾಮದವರಾದ ವಿನಾಯಕ, 10ನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.