ADVERTISEMENT

ವಾಟ್ಸ್‌ಆ್ಯಪ್ ವೆಬ್ ವರ್ಷನ್‌ಗೂ ಬರುತ್ತಿದೆ ವಾಯ್ಸ್, ವಿಡಿಯೊ ಕಾಲ್ ಫೀಚರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2020, 7:38 IST
Last Updated 18 ಡಿಸೆಂಬರ್ 2020, 7:38 IST
ವಾಟ್ಸ್‌ಆ್ಯಪ್
ವಾಟ್ಸ್‌ಆ್ಯಪ್   
"ವಾಟ್ಸ್‌ಆ್ಯಪ್ ವೆಬ್ ವಿಡಿಯೊ, ವಾಯ್ಸ್ ಕಾಲ್ ಫೀಚರ್ ಐಕಾನ್ (ಚಿತ್ರ ಕೃಪೆ: WABetaInfo)"

ನವದೆಹಲಿ: ಇತ್ತೀಚೆಗಷ್ಟೇ ಯುಪಿಐ ಆಧಾರಿತ ಡಿಜಿಟಲ್ ಹಣ ಪಾವತಿ ಸೇವೆ ಆರಂಭಿಸಿರುವ ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್, ಈಗ ವೆಬ್ ವರ್ಷನ್‌ನಲ್ಲೂ (ಡೆಸ್ಕ್‌ಟಾಪ್) ವಾಯ್ಸ್ ಹಾಗೂ ವಿಡಿಯೊ ಕಾಲ್ ಫೀಚರ್ ಪರಿಚಯಿಸಲು ಮುಂದಾಗಿದೆ.

200 ಕೋಟಿಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ನಂ.1 ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸ್‌ಆ್ಯಪ್, ನಿರಂತರ ಅಂತರಾಳದಲ್ಲಿ ಹೊಸ ಹೊಸ ಫೀಚರ್ ಪರಿಚಯಿಸುವುದರಲ್ಲಿ ಕಾರ್ಯ ಮಗ್ನವಾಗಿದೆ.

ಆದಾಗ್ಯೂ ಬಳಕೆದಾರರು ಮೊಬೈಲ್ ಹಾಗೂ ಡೆಸ್ಕ್‌ಟಾಪ್ ವರ್ಷನ್‌ಗಳಲ್ಲಿ ವಾಯ್ಸ್ ಹಾಗೂ ವಿಡಿಯೊ ಕಾಲ್ ಸೇರಿದಂತೆ ಏಕರೂಪದ ವೈಶಿಷ್ಟ್ಯಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ.

ADVERTISEMENT

ಈಗ, ಬಳಕೆದಾರರ ಪ್ರಾರ್ಥನೆಯನ್ನು ಆಲಿಸಿರುವ ವಾಟ್ಸ್‌ಆ್ಯಪ್, ನೊಂದಾಯಿತ ಡೆವಲಪ್‌ಗಾರರಿಗೆ ಬೇಟಾ ವರ್ಷನ್ ಬಿಡುಗಡೆ ಮಾಡಿರುವುದಾಗಿಡಬ್ಲ್ಯೂಬಿಐ (WABetaInfo)ವೆಬ್‌ಸೈಟ್ ವರದಿ ಮಾಡಿದೆ.

ವಾಟ್ಸ್‌ಆ್ಯಪ್ ವೆಬ್ ವಿಡಿಯೊ, ವಾಯ್ಸ್ ಕಾಲ್ ಫೀಚರ್ ಐಕಾನ್ (ಚಿತ್ರ ಕೃಪೆ: WABetaInfo)


ಇಲ್ಲಿ ಕೊಟ್ಟಿರುವ ಚಿತ್ರದಲ್ಲಿ ವಾಟ್ಸ್‌ಆ್ಯಪ್ ಕಾಲಿಂಗ್ ಹಾಗೂ ವಿಡಿಯೊ ಐಕಾನ್‌ಗಳನ್ನುತೋರಿಸುತ್ತದೆ. ಆದರೂ ಈ ಎರಡು ಫೀಚರ್‌ಗಳು ಅಧಿಕೃತವಾಗಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಸದ್ಯದಲ್ಲೇ ವಾಟ್ಸ್‌ಆ್ಯಪ್ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.