ADVERTISEMENT

ಸಂಸದ ಶಶಿ ತರೂರ್ ಮಡಿಲಲ್ಲಿ ಮಲಗಿದ ಮಂಗ!

ಘಟನೆಗೆ ಸಂಬಂಧಿಸಿದ ಫೋಟೊಗಳನ್ನು ತರೂರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 13:33 IST
Last Updated 4 ಡಿಸೆಂಬರ್ 2024, 13:33 IST
<div class="paragraphs"><p>ಸಂಸದ ಶಶಿ ತರೂರ್ ಮಡಿಲಲ್ಲಿ ನಿದ್ರಿಸಿದ ಮಂಗ!</p></div>

ಸಂಸದ ಶಶಿ ತರೂರ್ ಮಡಿಲಲ್ಲಿ ನಿದ್ರಿಸಿದ ಮಂಗ!

   

ಬೆಂಗಳೂರು: ಸಂಸದ ಶಶಿ ತರೂರ್ ಅವರು ತಮ್ಮ ಬಳಿ ಬಂದ ಮಂಗವನ್ನು ಪ್ರೀತಿಯಿಂದ ಕಂಡಿದ್ದಕ್ಕೆ ಆ ಮಂಗ ಶಶಿ ತರೂರ್ ಅವರ ಮಡಿಲಲ್ಲಿ ಕೆಲಹೊತ್ತು ನಿದ್ರಿಸಿ ಹೋಗಿರುವ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದ ಫೋಟೊಗಳನ್ನು ತರೂರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಇಂದು ಬೆಳಿಗ್ಗೆ ನಾನು ನನ್ನ ಮನೆಯ ಗಾರ್ಡನ್‌ನಲ್ಲಿ ಪತ್ರಿಕೆ ಓದುತ್ತಿದ್ದಾಗ ಮಂಗವೊಂದು ಆಕಸ್ಮಿಕವಾಗಿ ನನ್ನ ಬಳಿ ಬಂದಿತು. ಮಂಗಕ್ಕೆ ನಾನು ಒಂದೆರೆಡು ಬಾಳೆಹಣ್ಣನ್ನು ನೀಡಿದೆ. ಆಶ್ಚರ್ಯ ಎಂದರೆ ಬಾಳೆಹಣ್ಣು ತಿಂದ ಮಂಗ ನನ್ನ ಎದೆಯ ಮೇಲೆ ತಲೆ ಇಟ್ಟು ಕೆಲಹೊತ್ತು ನಿದ್ರಿಸಿತು. ಬಳಿಕ ಅಲ್ಲಿಂದ ತೆರಳಿತು. ನನಗೆ ಇದೊಂದು ಅಸಾಮಾನ್ಯ ಅನುಭವ’ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಮೂಲಕ ಶಶಿ ತರೂರ್ ಅವರು ಪ್ರಾಣಿಗಳ ಮೇಲಿನ ಪ್ರೀತಿಯನ್ನು ಅಭಿವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಶಶಿ ತರೂರ್ ಅವರು ಕೇರಳದ ತಿರುವನಂತಪುರಂನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದಾರೆ ಮತ್ತು ವಿದೇಶಾಂಗ ವ್ಯವಹಾರಗಳ ಕಮೀಟಿಯ ಅಧ್ಯಕ್ಷರೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.