ADVERTISEMENT

‘ಅಸನಿ’ ಚಂಡಮಾರುತ: ಆಂಧ್ರದ ಸಮುದ್ರದಲ್ಲಿ ತೇಲಿ ಬಂತೇ ಚಿನ್ನದ ರಥ? ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2022, 6:11 IST
Last Updated 11 ಮೇ 2022, 6:11 IST
ಸಮುದ್ರದಲ್ಲಿ ತೇಲಿ ಬಂದಿರುವ ಚಿನ್ನದ ಬಣ್ಣದ ರಥ (ಟ್ವಿಟರ್‌ ಚಿತ್ರ)
ಸಮುದ್ರದಲ್ಲಿ ತೇಲಿ ಬಂದಿರುವ ಚಿನ್ನದ ಬಣ್ಣದ ರಥ (ಟ್ವಿಟರ್‌ ಚಿತ್ರ)   

ಅಮರಾವತಿ: ‘ಅಸನಿ’ ಚಂಡಮಾರುತದ ಪ್ರಭಾವದಿಂದ ಆಂಧ್ರ ಪ್ರದೇಶದ ಶ್ರೀಕಾಕುಳಂ, ಕಾಕಿನಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ.

ಸಮುದ್ರ ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ನಿಗೂಢ ಚಿನ್ನದ ಬಣ್ಣದ ರಥವೊಂದು ಶ್ರೀಕಾಕುಳಂನ ಸುನ್ನಪಲ್ಲಿ ಬಂದರಿನ ದಡಕ್ಕೆ ಬಂದು ತಲುಪಿದೆ.

ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಡಕ್ಕೆ ಬಂದ ರಥವನ್ನು ಮೀನುಗಾರು ಹಾಗೂ ಸ್ಥಳೀಯ ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

‘ಈ ರಥ ಬೇರೆ ದೇಶದಿಂದ ಬಂದಿರಬಹುದು. ಇದರ ಬಗ್ಗೆ ನಾವು ಗುಪ್ತಚರ ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದು ಎಸ್‌ಐ ನೌಪಾದ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.