ದೆಹಲಿ: ತ್ವರಿತ ಸಿದ್ಧ ಆಹಾರ ಪೂರೈಸುವಲ್ಲಿ ಜನಪ್ರಿಯವಾಗಿರುವ ಜೊಮಾಟೊ ತನ್ನ ಡೆಲಿವರಿ ಬಾಯ್‌ಗಳಿಂದ ಆಗಾಗ ಸುದ್ದಿಯಾಗುತ್ತಿರುತ್ತದೆ.
ಇದೀಗ ಇಂತಹದೇ ಒಂದು ಘಟನೆ ನಡೆದಿದೆ. ಹೌದು, ಜೊಮಾಟೊ ಡೆಲಿವರಿ ಬಾಯ್ ಒಬ್ಬ ತುಂಬಾ ತಡವಾಗಿ ಬಂದ ಎಂದು ಗ್ರಾಹಕನೊಬ್ಬ ಡೆಲಿವರಿ ಬಾಯ್‌ಗೆ ಆರತಿ ಎತ್ತಿ ತಿಲಕ ಇಟ್ಟು ಮನೆಗೆ ಸ್ವಾಗತ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಗ್ರಾಹಕ ಸಂಜೀವ್ ತ್ಯಾಗಿ ಅವರೇ ಈ ರೀತಿ ಮಾಡಿ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದರು. ವಿಡಿಯೊ ವೈರಲ್ ಆಗಿದೆ.
ಹಲ್ಡಿರಾಮ್ ಆಹಾರವನ್ನು ಸಂಜೀವ್ ಅವರು ಆರ್ಡರ್ ಮಾಡಿದ್ದರು. ಅದನ್ನು ಜೊಮಾಟೊ ಬಾಯ್ ಒಂದು ಗಂಟೆ ತಡವಾಗಿ ತೆಗೆದುಕೊಂಡು ಬಂದರು ಎಂದು ಸಂಜೀವ್ ಈ ರೀತಿ ತಮಾಷೆಯಾಗಿ ವಿಡಿಯೊ ಮಾಡಿ ಅದಕ್ಕೆ ಅಗ್ನಿಪಥ್ ಹಿನ್ನೆಲೆ ಹಾಡನ್ನು ಹಾಕಿ ಸೋಶಿಯಲ್ ಮಿಡಿಯಾಕ್ಕೆ ಹಾಕಿದ್ದಾರೆ.
ಅನೇಕ ನೆಟ್ಟಿಗರು ಇದಕ್ಕೆ ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಲೇಟ್ ಆಗಿ ಬಂದ ಎಂದು ಅನೇಕರು ಡೆಲಿವರಿ ಬಾಯ್‌ಗಳಿಗೆ ಹಲ್ಲೆ ಮಾಡುವುದು ಬೆದರಿಸುವುದು ಮಾಡುತ್ತಾರೆ. ಸಂಜೀವ್ ಅವರು ಈ ರೀತಿ ಮಾಡಿರುವುದು ಎಷ್ಟೋ ಉತ್ತಮ ಎಂದಿದ್ದಾರೆ.
ಆದರೆ ಜೊಮಾಟೊ ಡೆಲಿವರಿ ಬಾಯ್ ಆಶಿಸ್ ಜಾ ಅವರು ಗ್ರಾಹಕ ಸಂಜೀವ್ ಅವರ ಆರೋಪ ಸುಳ್ಳು. ನಾನು ಸರಿಯಾದ ಸಮಯಕ್ಕೆ ಆಹಾರ ತೆಗೆದುಕೊಂಡು ಹೋಗಿ ಕೊಟ್ಟಿದ್ದೆ ಎಂದು ಆರ್ಡ್‌ರ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡು ಸಂಜೀವ್ ಅವರು ವಿಡಿಯೊ ವೈರಲ್ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.