ADVERTISEMENT

ಮರಳಿ ತಾಯಿಯ ಮಡಿಲು ಸೇರಿದ ಮರಿ ಆನೆ: ಮಾತೃ ವಾತ್ಸಲ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2024, 16:06 IST
Last Updated 5 ಜನವರಿ 2024, 16:06 IST
<div class="paragraphs"><p>ವಿಡಿಯೊದಲ್ಲಿನ ದೃಶ್ಯ</p></div>

ವಿಡಿಯೊದಲ್ಲಿನ ದೃಶ್ಯ

   

ತಮಿಳುನಾಡು: ರಕ್ಷಣಾ ಕಾರ್ಯಾಚರಣೆಯ ಬಳಿಕ ಕಾಡಾನೆ ಮರಿಯೊಂದು ತನ್ನ ತಾಯಿಯ ಮಡಿಲು ಸೇರಿದ ವಿಡಿಯೊ ನೆಟ್ಟಿಗರ ಹೃದಯ ಗೆದ್ದಿದೆ. ಪುನರ್‌ಮಿಲನದ ಬಳಿಕ ಮರಿ ಆನೆ ತಾಯಿಯನ್ನು ಹೊಕ್ಕ ದೃಶ್ಯ ತಾಯಿ ಮಕ್ಕಳ ಬಾಂಧವ್ಯದ ಪ್ರತೀಕದಂತಿದೆ.

ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಪ್ಪಿಸಿಕೊಂಡಿದ್ದ ಮರಿ ಆನೆಯನ್ನು ಅದರ ತಾಯಿ ಆನೆಯ ಬಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತಲುಪಿಸಿದ್ದಾರೆ. ಮರಿ ಸಿಕ್ಕ ನೆಮ್ಮದಿಯಲ್ಲಿ ಮಲಗಿರುವ ಆನೆ, ತಾಯಿ ಸಿಕ್ಕ ಖುಷಿಯಲ್ಲಿ ಮರಿ ಆನೆ ಇರುವ ಅಪರೂಪದ ದೃಶ್ಯವನ್ನು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮಾತೃ ವಾತ್ಸಲ್ಯದ ಸಂಕೇತದಂತಿರುವ ವಿಡಿಯೊ 45 ಸೆಕೆಂಡ್‌ಗಳದ್ದು.

ADVERTISEMENT

ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ತಮಿಳುನಾಡು ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಆನಂದ್‌ ಮಹಿಂದ್ರಾ ಸೇರಿದಂತೆ ವಿವಿಧ ಗಣ್ಯರಿಂದ ಪ್ರಶಂಸೆಗಳ ಮಹಾಪೂರವೇ ಹರಿಬಂದಿದೆ.

‘ತಾಯಿ ಆನೆಯ ಮೃದುವಾದ ಅಪ್ಪುಗೆಯು ಮರಳಿ ಮಡಿಲು ಸೇರಿದ ಮರಿ ಆನೆಗೆ ಅತ್ಯಗತ್ಯವಾಗಿ ಬೇಕಿದ್ದ ಧೈರ್ಯ ಹಾಗೂ ಪ್ರೀತಿಯನ್ನು ನೀಡುವಂತಿದೆ. ಮರಿ ಆನೆಯು ಪುನಃ ತನ್ನ ತಾಯಿಯ ಮಡಿಲು ಸೇರುವಂತೆ ಮಾಡಿದ ಅರಣ್ಯ ಸಿಬ್ಬಂದಿಗಳಿಗೂ, ಅಧಿಕಾರಿಗಳಿಗೂ ನನ್ನ ಅನಂತ ಧನ್ಯವಾದಗಳು’ ಎಂದು ಸಾಹು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.