ಕೋಲ್ಕತ್ತ: ವ್ಯಕ್ತಿಯೊಬ್ಬರ ಹೆಸರನ್ನುರೇಷನ್ ಕಾರ್ಡ್‌ನಲ್ಲಿ ದತ್ತಾ ಬದಲು ಕುತ್ತಾ (ನಾಯಿ) ಎಂದು ದಾಖಲು ಮಾಡಿದ್ದಕ್ಕೆ ಆತ ಸಂಬಂಧಿಸಿದ ಅಧಿಕಾರಿಗಳಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾನೆ.
ಈ ಘಟನೆ ಪಶ್ಚಿಮ ಬಂಗಾಳದ ಬಂಕುರಾದಲ್ಲಿನಡೆದಿದೆ.
ಶ್ರೀಕಾಂತಿ ಕುಮಾರ್ ದತ್ತಾ ಎನ್ನುವ ವ್ಯಕ್ತಿಯ ಹೆಸರಲ್ಲಿ ದತ್ತಾ ಬದಲು ಕುತ್ತಾ ಎಂದು ತಪ್ಪಾಗಿ ನಮೂದಿಸಲಾಗಿದೆ. ಇದರಿಂದ ಕೆರಳಿದಶ್ರೀಕಾಂತಿ ಕುಮಾರ್ಬಂಕುರಾದ ಸ್ಥಳೀಯ ಪಾಲಿಕೆ ಅಧಿಕಾರಿ ಕಾರಿನಲ್ಲಿ ಬರುವಾಗಎದುರು ಹೋಗಿ ಪ್ರತಿಭಟನೆ ರೂಪವಾಗಿ ಯಾವುದೇ ಒಂದು ಮಾತು ಮಾತನಾಡದೇ ಬೌ ಬೌ ಎಂದು ಬೊಗಳಿದ್ದಾನೆ. ಇದರಿಂದ ಕಂಗಾಲದ ಅಧಿಕಾರಿ ದಾಖಲೆ ನೋಡಿ ಹೌಹಾರಿದ್ದಾರೆ.
ಕಡೆಗೂ ಸುಮ್ಮನಾಗದ ಶ್ರೀಕಾಂತಿ ಕುಮಾರ್ ದತ್ತಾ, ನಾಯಿಯ ಹಾಗೇ ಬೊಗಳಿ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿದೆ. ಕಡೆಗೆ ಅಧಿಕಾರಿಗಳು ಸರಿ ಮಾಡುವುದಾಗಿ ಭರವಸೆ ನೀಡಿ ಕಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.