ADVERTISEMENT

ತಲೆ ಕೂದಲು, ಗಡ್ಡ ಟ್ರಿಮ್ ಮಾಡಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2023, 7:42 IST
Last Updated 1 ಮಾರ್ಚ್ 2023, 7:42 IST
ರಾಹುಲ್ ಗಾಂಧಿ (ಚಿತ್ರ ಕೃಪೆ: Twitter/@IYC)
ರಾಹುಲ್ ಗಾಂಧಿ (ಚಿತ್ರ ಕೃಪೆ: Twitter/@IYC)   

ನವದೆಹಲಿ: ಭಾರತ್ ಜೋಡೊ ಯಾತ್ರೆ ವೇಳೆ ಗಡ್ಡ ಬೆಳೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ತಲೆ ಕೂದಲು, ಗಡ್ಡ-ಮೀಸೆ ಟ್ರಿಮ್ ಮಾಡಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶ್ವ ವಿಖ್ಯಾತ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಬ್ರಿಟನ್‌ಗೆ ತೆರಳಿರುವ 52 ವರ್ಷದ ರಾಹುಲ್ ಗಾಂಧಿ, ಹೊಸ ಲುಕ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಈ ಸಂಬಂಧ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ADVERTISEMENT

ರಾಹುಲ್ ಗಾಂಧಿ ಅವರು, ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ 'Learning to Listen in the 21st Century' ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಒಂದು ವಾರ ಬ್ರಿಟನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಅನಿವಾಸಿ ಭಾರತೀಯ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಕನ್ಯಕುಮಾವರಿಯಿಂದ ಕಾಶ್ಮೀರದವರೆಗೆ ನಾಲ್ಕು ತಿಂಗಳ ಪರ್ಯಂತ 3,500 ಕಿ.ಮೀ. ದೂರದ ಪಾದಯಾತ್ರೆಯಲ್ಲಿ ರಾಹುಲ್ ಅವರ ಲುಕ್ ಸಂಪೂರ್ಣವಾಗಿ ಬದಲಾಗಿತ್ತು. ಬಿಳಿ ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಅವರು ಗಡ್ಡ ಹಾಗೂ ತಲೆ ಕೂದಲು ಟ್ರಿಮ್ ಮಾಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.