
ಕ್ಯಾಮರಾ ಕಣ್ಣಿಗೆ ಬಿದ್ದ ಮೂರು ಹಿಮ ಚಿರತೆಗಳು! ವಿಡಿಯೊ ಹಂಚಿಕೊಂಡ BRO
ಬೆಂಗಳೂರು: ಹಿಮಾಲಯ ಶ್ರೇಣಿಯಲ್ಲಿ ಕಾಣಸಿಗುವ ಅಪರೂಪದ ಹಿಮ ಚಿರತೆಗಳು (Snow Leopard) ಕ್ಯಾಮೆರಾ ಕಣ್ಣಿಗೆ ಬಿದ್ದಿವೆ.
ರಕ್ಷಣಾ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಬಾರ್ಡರ್ ರೋಡ್ ಆರ್ಗನೈಸೆಷನ್ (BRO) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮೂರು ಹಿಮ ಚಿರತೆಗಳು ಒಟ್ಟಿಗೆ ಹಿಮದಲ್ಲಿ ಆಟ ಆಡುವ ಅಪರೂಪದ ವಿಡಿಯೊ ಹಂಚಿಕೊಂಡಿದೆ.
ವಿಡಿಯೊ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದ್ದು, ಒಟ್ಟಿಗೆ ಕಾಣಿಸಿಕೊಂಡಿದ್ದ ಮೂರು ಹಿಮ ಚಿರತೆಗಳನ್ನು ಅನೇಕರು ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಮ ಚಿರತೆಗಳು ಎಲ್ಲಿ ಕಾಣಿಸಿದವು ಎಂಬುದನ್ನು ಬಿಆರ್‌ಒ ಅಧಿಕೃತಗೊಳಿಸಿಲ್ಲವಾದರೂ ಇದು ಲಡಾಖ್ ಬಳಿ ಸೆರೆ ಹಿಡಿಯಲಾಗಿರುವ ವಿಡಿಯೊ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಆರ್‌ಒ ಸದ್ಯ ಸರ್ವ ಋತುಗಳಲ್ಲಿ ಬಳಸಲ್ಪಡುವ ರಸ್ತೆಯನ್ನು ಪ್ರಾಕೆಕ್ಟ್ ಹಿಮಾಂಕ್ ಹೆಸರಿನಲ್ಲಿ ಹಿಮಾಲಯನ್ ರಾಜ್ಯಗಳಲ್ಲಿ ಆರಂಭಿಸಿದೆ. ಈ ವೇಳೆ ಬಿಆರ್‌ಒ ಅಧಿಕಾರಿಗಳು ವಿಶೇಷ ಕ್ಯಾಮೆರಾದಲ್ಲಿ ಹಿಮ ಚಿರತೆಗಳ ವಿಡಿಯೊ ಸೆರೆಹಿಡಿದ್ದಾರೆ. ಪ್ರಕೃತಿ–ಅಭಿವೃದ್ಧಿ ಒಟ್ಟಿಗೆ ಹೋಗಬೇಕು ಎಂದು ಎಕ್ಸ್ ಪೋಸ್ಟ್‌ನಲ್ಲಿ ಮಾಡಿದೆ.
ಭಾರತದ ಹಿಮಾಲಯನ್ ರಾಜ್ಯಗಳು ಹಿಮ ಚಿರತೆಗಳ ನೈಸರ್ಗಿಕ ತಾಣಗಳಾಗಿವೆ. ಹೆಚ್ಚಾಗಿ ಲಡಾಖ್, ಉತ್ತಾರಾಖಂಡ, ಜಮ್ಮು –ಕಾಶ್ಮೀರ, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂನಲ್ಲಿ ಹಿಮ ಚಿರತೆಗಳು ಕಾಣಸಿಗುತ್ತವೆ. ಸದ್ಯ ಇವು ಅಳಿವಿನಂಚಿನಲ್ಲಿವೆ. ಲಡಾಖ್‌ನಲ್ಲಿ ಅತಿ ಹೆಚ್ಚು ಹಿಮ ಚಿರತೆಗಳಿವೆ.
ಇತ್ತೀಚಿನ ಎಸ್‌ಪಿಎಐ ವರದಿ ಪ್ರಕಾರ ಭಾರತದಲ್ಲಿ 718 ಹಿಮ ಚಿರತೆಗಳು ಇವೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.