ADVERTISEMENT

ವಿಡಿಯೊ ನೋಡಿ: ಶರಧಿ ಬಿಟ್ಟು ಹೆದ್ದಾರಿಗೆ ಬಂದ ಕಡಲ ಸಿಂಹ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2022, 9:05 IST
Last Updated 9 ಜನವರಿ 2022, 9:05 IST
ಕಡಲ ಸಿಂಹ
ಕಡಲ ಸಿಂಹ   

ಕ್ಯಾಲಿಪೋರ್ನಿಯಾ: ಸಾಮಾನ್ಯವಾಗಿ ಕಡಲ ಸಿಂಹಗಳು ಕಡಲನ್ನು ಬಿಟ್ಟು ಹೊರಗೆ ಬರುವುದು ತೀರಾ ಅಪರೂಪ. ಆದರೆ, ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಕಡಲ ಸಿಂಹವೊಂದು ಹೆದ್ದಾರಿಗೇ ಬಂದು ಅಚ್ಚರಿ ಸೃಷ್ಟಿಸಿದೆ.

ಹೌದು, ಕ್ಯಾಲಿಪೋರ್ನಿಯಾದಲ್ಲಿ ಕಡಲ ಸಿಂಹವೊಂದು ಹೆದ್ದಾರಿಗೆ ಬಂದು ಸುರಕ್ಷಿತವಾಗಿ ಮತ್ತೆ ಕಡಲ ಮಡಿಲು ಸೇರಿದೆ.

ವಾಹನ ದಟ್ಟಣೆಯ ಹೆದ್ದಾರಿಗೆ ನುಸುಳುತ್ತಾ ಬಂದ ಕಡಲ ಸಿಂಹವೊಂದನ್ನು ಕಂಡು ವಾಹನ ಸವಾರರು ಅಚ್ಚರಿಗೊಂಡಿದ್ದರು. ಕೂಡಲೇ ಕೆಲವರು ವಾಹನದಿಂದ ಇಳಿದು ಅದಕ್ಕೆ ಹೆದ್ದಾರಿ ದಾಟಲು ಅನುವು ಮಾಡಿಕೊಟ್ಟಿದ್ದಾರೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ADVERTISEMENT

ಬಳಿಕ ಕಡಲಜೀವಿ ಸಂರಕ್ಷರು ಸ್ಥಳಕ್ಕೆ ಬಂದು ಕಡಲ ಸಿಂಹವನ್ನು ಸುರಕ್ಷಿತವಾಗಿ ಕಡಲಿಗೆ ಬಿಟ್ಟಿದ್ದಾರೆ. ಅದಕ್ಕೆ ಯಾವುದೇ ಗಾಯಗಳಾಗಿರಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.