ರೈಲು ವೇಗವಾಗಿ ಚಲಿಸುವಾಗ ರೀಲ್ಸ್‌ಗಾಗಿ ಹಳಿಯಲ್ಲಿ ಮಲಗಿ ಬಾಲನಿಂದ ಸಾಹಸ!
ಬೆಂಗಳೂರು: ರೈಲು ವೇಗವಾಗಿ ಚಲಿಸುವಾಗ ಬಾಲಕನೊಬ್ಬ ರೈಲು ಹಳಿಯಲ್ಲಿ ಮಲಗಿ ಅಪಾಯಕಾರಿ ಸಾಹಸ ಪ್ರದರ್ಶಿಸಿ ಪೊಲೀಸ್ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ಒಡಿಶಾದಲ್ಲಿ ಇತ್ತೀಚೆಗೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಆರ್‌ಪಿಎಫ್ ಪ್ರಕರಣ ದಾಖಲಿಸಿಕೊಂಡು ಬಾಲಕರಿಬ್ಬರನ್ನು ವಶಕ್ಕೆ ಪಡೆದಿದೆ.
ಈ ಕುರಿತ ಎಚ್ಚರಿಕೆ ವಿಡಿಯೊ ಹಂಚಿಕೊಂಡಿರುವ ಆರ್‌ಪಿಎಫ್, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಸಂಬಂಧಿಸಿದ ಬಾಲಕರಿಗೆ ಕಾನೂನು ಪ್ರಕಾರ ಬಿಸಿ ಮುಟ್ಟುತ್ತದೆ. ಘಟನೆಯಲ್ಲಿ ಬಾಲಕರಿಗೆ ಗಾಯಗಳಾಗಿಲ್ಲ. ಆದರೆ, ಪಾಲಕರು, ಶಿಕ್ಷಕರು ಮಕ್ಕಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ. ಇಂತಹ ಕೃತ್ಯಗಳಲ್ಲಿ ಭಾಗಿಯಾಗದಿರುವಂತೆ ಸರಿಯಾದ ಶಿಕ್ಷಣ ನೀಡಿ ಎಂದು ಸಲಹೆ ನೀಡಿದೆ.
ಒಡಿಶಾದ ಬೌದ್ಧ ಜಿಲ್ಲೆಯ ಪುರಾನಾಪಾನಿ ರೈಲು ನಿಲ್ದಾಣದ ಬಳಿಯ ತಾಲುಪಾಲಿ ಬಳಿ ಘಟನೆ ನಡೆದಿತ್ತು. ಬಾಲಕನೊಬ್ಬ ರೈಲು ಬರುವಾಗ ಹಳಿಯಲ್ಲಿ ಮಲಗಿ ರೈಲು ಹೋದ ಮೇಲೆ ಎದ್ದೇಳುತ್ತಾನೆ. ರೀಲ್ಸ್ ವಿಡಿಯೊಗಳಿಗಾಗಿ ಇನ್ನೊಬ್ಬ ಬಾಲಕ ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ ಎಂದು ಒಡಿಶಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಲಕರ ವರ್ತನೆ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ‘ಅಪಾಯಕಾರಿ ಸಾಹಸ ಮಾಡದಿರಿ. ಕಾನೂನುಗಳನ್ನು ಗೌರವಿಸಿ’ ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.