ADVERTISEMENT

ವಿಡಿಯೊ: ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಸಖತ್ ಡ್ಯಾನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಏಪ್ರಿಲ್ 2025, 2:50 IST
Last Updated 20 ಏಪ್ರಿಲ್ 2025, 2:50 IST
<div class="paragraphs"><p>ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಸಖತ್ ಡ್ಯಾನ್ಸ್</p></div>

ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಸಖತ್ ಡ್ಯಾನ್ಸ್

   

ಬೆಂಗಳೂರು: ದೆಹಲಿ ಮಾಜಿ ಮುಖ್ಯಮಂತ್ರಿ ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್‌ ಮದುವೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಪತ್ನಿ ಗುರುಪ್ರೀತ್ ಮಾನ್ ಅವರ ಜೊತೆ ಭರ್ಜರಿ ನೃತ್ಯ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ತಮ್ಮ ಪತ್ನಿಯ ಜೊತೆ ಭಗವಂತ್ ಮಾನ್ ಅವರು ಪಂಜಾಬಿ ಹಾಡಿಗೆ ಹೆಜ್ಜೆ ಹಾಕಿದ್ದು ನೋಡುಗರನ್ನು ರೋಮಾಂಚನಗೊಳಿಸಿದೆ.

ADVERTISEMENT

ಶುಕ್ರವಾರ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಯಿತು. ಹರ್ಷಿತಾ ಕೇಜ್ರಿವಾಲ್‌ ಅವರು ಸ್ನೇಹಿತ ಸಂಭವ್ ಜೈನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದಕ್ಕೂ ಮುನ್ನ ಗುರುವಾರ ಶಾಂಗ್ರಿ–ಲಾ ಹೋಟೆಲ್‌ನಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆದಿದ್ದು ಎಎಪಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಭಾಗವಹಿಸಿದ್ದರು.

ವಿವಾಹ ಪೂರ್ವ ಕಾರ್ಯಕ್ರದಲ್ಲಿ ಕೇಜ್ರಿವಾಲ್‌ ಅವರೂ ಪತ್ನಿ ಸುನಿತಾ ಅವರ ಜೊತೆಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

2018ರಲ್ಲಿ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿರುವ ಹರ್ಷಿತಾ ಅವರು 2021ರಲ್ಲಿ ಕರಣ್ ದ್ವಿವೇದಿ ಜೊತೆಗೂಡಿ ‘ಬೇಸಿಲ್ ಹೆಲ್ತ್’ ಎಂಬ ನವೋದ್ಯಮವನ್ನು ಸ್ಥಾಪಿಸಿದ್ದಾರೆ. ಸಂಭವ್ ಜೈನ್‌ ಅವರು ಪ್ರಸ್ತುತ ಜಿನೀ(Genie) ಎಂಬ ಖಾಸಗಿ ಕಂಪನಿಯಲ್ಲಿ ಯೋಜನಾ ನಿರ್ವಹಣಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.