`ಜಾಗೃತಗೊಳ್ಳುತ್ತಿದೆ ಪುರುಷ ಸಂಘಟನೆ' ಅಗ್ರ ಲೇಖನ (15, 06, 2013- ಶೋಭಾ ಎಚ್.ಜಿ.) ಔಚಿತ್ಯಪೂರ್ಣವಾಗಿತ್ತು. ಇದೊಂದು ಅಪರೂಪದ ಲೇಖನ. ನಿಜಕ್ಕೂ ಸಂಘಟನೆಗೆ ಒತ್ತು ಕೊಟ್ಟರೆ ಶೋಷಿತ ಪುರುಷರ ಬಾಳು ಬಂಗಾರವಾದೀತು.
-ಎಂ.ಮೃತ್ಯುಂಜಯಪ್ಪ, ಚಿತ್ರದುರ್ಗ
ಕೌಟುಂಬಿಕ ಸಮಸ್ಯೆಗಳಿಗೆ ಕಾನೂನು ರಕ್ಷಣೆ ನೀಡಬಲ್ಲದು. ಆದರೆ ಅದು ಬದುಕಿನ ನೆಮ್ಮದಿಗೆ ರಕ್ಷಣೆ ನೀಡೀತೇ? ಇಬ್ಬರೂ ಅರಿತು ಬದುಕಿನ ಬಂಡಿ ಸಾಗಿಸಬೇಕು. ಉಪಯುಕ್ತ ಲೇಖನಕ್ಕೆ ಅಭಿನಂದನೆ.
-ಪಿ.ಚಂದ್ರಕಲಾ, ಮೈಸೂರು, ಶಂಕರಶೆಟ್ಟಿ ಕೊತ್ತಾಡಿ, ವಡ್ಡರ್ಸೆ, ಮೈತ್ರೇಯಿ, ನಾಗಮಂಗಲ, ಚಿತ್ಪಾವನಿ ಗಣೇಶ್, ದಾವಣಗೆರೆ, ಮಂಗಳಾ, ಬೆಂಗಳೂರು
ದೇವರು ಮೊದಲು ಗಂಡನ್ನು ಸೃಷ್ಟಿಸಿದ. ಗಂಡಿಗೆ ಅಹಂ ಹೆಚ್ಚಾಗಿ ದೇವರಿಗೇ ಸವಾಲೆಸೆದು, ಭೂ ಮಂಡಲವನ್ನು ಅಲ್ಲೋಲ ಕಲ್ಲೋಲ ಮಾಡತೊಡಗಿದ. ತನ್ನ ತಪ್ಪನ್ನು ಸರಿಪಡಿಸಲು ದೇವರು ತಕ್ಷಣ ಹೆಣ್ಣನ್ನು ಸೃಷ್ಟಿಸಿದ. ಥಟ್ಟನೆ ವಿಶ್ವ ಸಹಜ ಸ್ಥಿತಿಗೆ ಮರಳಿತು.
-ಕೆ.ಪ್ರಕಾಶ್, ಚಿಕ್ಕಜೋಗಿಹಳ್ಳಿ, ಬಳ್ಳಾರಿ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.