ಸ್ವಯಂ ಕೃತಾಪರಾಧ
`ಯಾವ ಮೋಹದ ಮಾಯೆ' (ಜೂನ್ 8, ಮಾಲತಿ ಭಟ್) ಅಗ್ರ ಲೇಖನ ಸಮಯೋಚಿತವಾಗಿತ್ತು. ಇಂದಿನ ದಿನಗಳಲ್ಲಿ ಮೇಲಧಿಕಾರಿಗಳ ಒತ್ತಡ ಅಥವಾ ಯಾವುದೋ ಆಮಿಷಕ್ಕೆ ಒಳಗಾಗಿ ಮಹಿಳೆ ತನ್ನ ಬದುಕಿನಲ್ಲಿ ಕಪ್ಪು ಚುಕ್ಕೆ ಹಾಕಿಸಿಕೊಳ್ಳುವ ಪರಿಸ್ಥಿತಿ ಒಂದೆಡೆಯಾದರೆ, ಲೈಂಗಿಕ ದೌರ್ಜನ್ಯದಿಂದ ಉನ್ನತ ಹುದ್ದೆಯಿಂದ ಕೆಳಗಿಳಿಯುವ ಪುರುಷ ಇನ್ನೊಂದೆಡೆ.
ಹೀಗೆ ವಿಭಿನ್ನ ಸಮಸ್ಯೆಗಳನ್ನು ತಾವಾಗೇ ತಂದುಕೊಳ್ಳುವ ಜನರ ಭವಿಷ್ಯದ ಮೇಲೆ ಲೇಖನ ಬೆಳಕು ಚೆಲ್ಲಿದೆ. ಡಾ. ಪದ್ಮಿನಿ ಪ್ರಸಾದ್ ಸೇರಿದಂತೆ ಎಲ್ಲರ ಅಭಿಪ್ರಾಯಗಳು ನಿಜಕ್ಕೂ ಸತ್ಯ.
-ಶಂಕರ ಶೆಟ್ಟಿ ಕೊತ್ತಾಡಿ, ವಡ್ಡರ್ಸೆ
ಯಾವುದೋ ಮೋಹದ ಮಾಯೆಗೆ ಮರುಳಾಗಿ ಕೊನೆಗೆ ಮರ್ಯಾದೆ ಕಳೆದುಕೊಂಡಾಗ ಬೀದಿ ಪಾಲಾಗುವುದು ಗಂಡಸೊಬ್ಬನೇ ಅಲ್ಲ. ನಿರಪರಾಧಿಗಳಾದ ಅವನ ಹೆಂಡತಿ, ಮಕ್ಕಳೂ ಅಪರಾಧಿಗಳಂತೆ ಸಮಾಜದ ಎದುರು ತಲೆ ತಗ್ಗಿಸಬೇಕಾಗುತ್ತದೆ.
ಲೇಖನ ಓದಿಯಾದರೂ ದುರ್ಬಲ ಮನಸ್ಸಿನ ಪುರುಷ ವರ್ಗ ಬದಲಾದೀತೆ? ಸಾವಿರ ವರ್ಷವಾದರೂ ಸಾಂದರ್ಭಿಕ ಎಂದೇ ಗುರುತಿಸಲಾಗುವ ವಿಷಯವನ್ನು ಬರೆದ ಲೇಖಕಿಗೆ ಧನ್ಯವಾದ.
-ದಯಾ ಪುತ್ತೂರ್ಕರ್, ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.