ಕಲಬುರಗಿ (kalaburagi) ಜಿಲ್ಲಾ ಕೇಂದ್ರದಿಂದ 60 ಕಿ.ಮೀ. ದೂರದಲ್ಲಿರುವ ಗ್ರಾಮ ನಿಂಬಾಳ (Nimbala) . ಆಳಂದ (Alanda) ತಾಲ್ಲೂಕಿನಲ್ಲಿರುವ ಈ ಗ್ರಾಮ ದಶಕದ ಹಿಂದೆ ಕಳಪೆ ಸಾರಾಯಿಯಿಂದ (alcohol) ಕಂಗೆಟ್ಟು ಹೋಗಿತ್ತು. ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿದ್ದವರ ಗಲಾಟೆ, ಬೈಗುಳದ ಸದ್ದೇ ಕೇಳುತ್ತಿತ್ತು. ಈ ಗ್ರಾಮವನ್ನು ಸಾರಾಯಿ ಮುಕ್ತ (liquor free) ಮಾಡಬೇಕೆಂಬ ಜಡೆ ಶಾಂತಲಿಂಗೇಶ್ವರ ಸ್ವಾಮೀಜಿಯವರ ಕರೆಗೆ ಓಗೊಟ್ಟ ಮಹಿಳೆಯರು, ಸಂಗಮ್ಮ ಸಾಣಕ (Sangamma Sanakka) ಅವರ ನೇತೃತ್ವದಲ್ಲಿ ದೊಡ್ಡ ಹೋರಾಟವನ್ನೇ ಮಾಡಿದರು. ಸಾಕಷ್ಟು ವಿರೋಧ ಎದುರಾದರೂ ಅವುಗಳನ್ನೆಲ್ಲ ಮೀರಿ ನಿಂಬಾಳ ಗ್ರಾಮವನ್ನು ನಶೆಮುಕ್ತವಾಗಿಸುವಲ್ಲಿ ಯಶಸ್ವಿಯಾದರು. ಈ ಮಹಿಳೆಯರ ಹೋರಾಟದ ಕಥನ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.